Job Description: * BSNL ಮತ್ತು BBNL ವಿಲೀನಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ.* ಈ ವಿಲೀನದಿಂದಾಗಿ, ದೇಶದ 1.85 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ ಹಾಕಲಾಗಿರುವ ಒಪ್ಟಿಕಲ್ ಫೈಬರ್ ಕೇಬಲ್‌ಗೆ (OFC) ಹೆಚ್ಚುವರಿಯಾಗಿ 5.67 ಲಕ್ಷ ಕಿಲೋ ಮೀಟರ್ OFC ಪಡೆಯಲಿದೆ.* ಇದಕ್ಕೆ ಯುಎಸ್ ಒಎಫ್ ಹಣ ಒದಗಿಸುತ್ತದೆ. ಪ್ರಸ್ತುತ ದೇಶದಲ್ಲಿ 6.83 ಕಿಲೋ ಮೀಟರ್‌ ಅಧಿಕ OFC ಜಾಲವಿದೆ.* ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಸಂಸ್ಥೆಯನ್ನು ( ಬಿಎಸ್‌ಎನ್ಎಲ್ ) 1.64 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಪುನರುಜ್ಜೀವನಗೊಳಿಸುವ ಮಹತ್ವದ ಯೋಜನೆಗೆ ಜುಲೈ 27 ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. * ದೂರಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ನಷ್ಟದಲ್ಲಿರುವ ಸರ್ಕಾರಿ ಸಂಸ್ಥೆಯು ಖಾಸಗಿ ಟೆಲಿಕಾಂ ಸಂಸ್ಥೆಗಳೊಂದಿಗೆ ಸ್ಪರ್ಧಿಸಲು ಅನುಕೂಲವಾಗುವಂತೆ ಈ ಪ್ಯಾಕೇಜ್ ರೂಪಿಸಲಾಗಿದೆ ಎಂದುರು.* ದೇಶದ 29,616 ಗ್ರಾಮಗಳಲ್ಲಿ ಸದ್ಯಕ್ಕೆ 4 ಜಿ ಇಂಟರ್‌ನೆಟ್ ಸೌಕರ್ಯ ಲಭ್ಯವಿಲ್ಲ. ಈ ಎಲ್ಲ ಹಳ್ಳಿಗಳಿಗೆ 4 ಜಿ ಸೇವೆಗಳನ್ನು ವಿಸ್ತರಿಸುವ ಯೋಜನೆಗೂ ಕೇಂದ್ರ ನಟಿ ಅನುಮೋದನೆ ನೀಡಿದೆ. * ಇದಕ್ಕಾಗಿ ದೇಶದಾದ್ಯಂತ 19,722 ಟವರ್ ಗಳನ್ನು ಸ್ಥಾಪಿಸಲಾಗುತ್ತದೆ. ಈ ಯೋಜನೆಯ ವೆಚ್ಚ 26,316 ಕೋಟಿ ರೂಪಾಯಿ ಆಗಿದೆ. ಯೂನಿವರ್ಸಲ್ ಸರ್ವಿಸ್ ಒಬ್ಲಿಗೇಶನ್ ಪಂಡ್ ನಿಂದ ಅದಕ್ಕೆ ಹಣಕಾಸು ಒದಗಿಸಲಿದೆ. * BBNL ಬಾಡ್‌ಬ್ಯಾಂಡ್‌ ಮೂಲಸೌಕರ್ಯ ಒದಗಿಸುವುದು ಅದರ ಉದ್ದೇಶವಾಗಿದೆ.* BSNL ಸರ್ಕಾರ ಸಾಮಾಜಿಕ ಉದ್ದೇಶಗಳನ್ನು ಗ್ರಾಮೀಣ ಹಾಗೂ ಒಳನಾಡುಗಳಿಗೆ ತಲುಪಿಸುವ ದಿಸೆಯಲ್ಲಿ ವೈರ್‌ಲೈನ್ ಸೇವೆಗಳನ್ನು ಒದಗಿಸುತ್ತಿದೆ .