Job Description: * ಭಾರತೀಯ ನೌಕಾ ಪಡೆಗೆ ಅಗತ್ಯವಾದ ಅಪ್ಲಿಕೇಶನ್‌ಗಳನ್ನು(ಆ್ಯಪ್) ಅಭಿವೃದ್ಧಿಪಡಿಸುವ ಸಲುವಾಗಿ ನೇವಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸ್ಪೇಸ್ ಅಪ್ಲಿಕೇಶನ್ಸ್ ಸೆಂಟರ್ ಒಪ್ಪಂದ ಮಾಡಿಕೊಂಡಿವೆ.* ಹವಾಮಾನಶಾಸ್ತ್ರ ಹಾಗೂ ಸಾಗರಶಾಸ್ತ್ರದಲ್ಲಿ ಉಪಗ್ರಹ ಆಧಾರಿತ ಆ್ಯಪ್ ಗಳನ್ನು ರೂಪಿಸಲು ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.* ಈ ಒಡಂಬಡಿಕೆಯು 2017 ರಲ್ಲಿ ಮಾಡಿಕೊಳ್ಳಲಾದ ಒಪ್ಪಂದದ ವಿಸ್ತರಣೆಯಾಗಿದೆ .* * ವಿದ್ಯಾರ್ಥಿಗಳಿಗೆ ನೆರವು : - * ಸೆಂಟರ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಎಜುಕೇಷನ್ ಇನ್ ಏಷ್ಯಾ ಆಂಡ್ ಪೆಸಿಫಿಕ್ ಇದರ ವಿದ್ಯಾರ್ಥಿಗಳಿಗೆ ತರಬೇತಿ ಕೋರ್ಸ್‌ಗಳನ್ನು ನಡೆಸಲು ಎಸ್ಎಸಿ ಮೂಲ ಸೌಕರ್ಯವನ್ನು ಒದಗಿಸುತ್ತದೆ.* ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಪ್ಲಿಕೇಶನ್ ಗಳ ಸಂಶೋಧನೆ, ಅಭಿವೃದ್ಧಿ ಮತ್ತು ಪ್ರಾತ್ಯಕ್ಷಿಕೆ ಇದರ ಕಾರ್ಯಭಾರವಾಗಿದೆ. ಅವು ದೂರಸಂವೇದಿ, ದೂರಸಂಪರ್ಕಗಳು, ಉಪಗ್ರಹ ನ್ಯಾವಿಗೇಶನ್‌ ಮತ್ತು ಹವಾಮಾನಶಾಸ್ತ್ರಕ್ಕೆ ಸಂಬಂಧಿಸಿದ ತಂತ್ರಜ್ಞಾನವಾಗಿದೆ.* ಎಸ್ಎಸಿ ಒಟ್ಟು ಮತ್ತು ಮೂರು ಕ್ಯಾಂಪಸ್ ಹೊಂದಿದೆ. ದೆಹಲಿಯಲ್ಲಿ ಒಂದು ಹಾಗೂ ಅಹಮದಾಬಾದ್ ನಲ್ಲಿ ಎರಡು ಕ್ಯಾoಪಸ್ ಗಳಿವೆ.