Job Description: * ಚೀನಾದ ಯುವಾಂಗ್‌ ವಾನ್-5 ನೌಕೆಗೆ ಹಂಬಂಟೋಟಾ ಬಂದರಿನಲ್ಲಿ ಲಂಗರು ಹಾಕಲು ಅನುಮತಿ ನೀಡುವಂತೆ ರನಿಲ್‌ ವಿಕ್ರಮಸಿಂಘೆ ಸರ್ಕಾರದ ಮೇಲೆ ಶ್ರೀಲಂಕಾದ ನೌಕಾಸೇನೆ ಮಾಜಿ ಮುಖ್ಯಸ್ಥ ಶರತ್‌ ವೀರಶೇಖರ ಒತ್ತಡ ಹೇರಿದ್ದರು.* ಚೀನಾದ ಒತ್ತಡಕ್ಕೆ ಮಣಿದ ಶ್ರೀಲಂಕಾ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ನೇತೃತ್ವದ ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆ. * ಸಾಲ ವಿನಿಮಯದ ಒಪ್ಪಂದದ ಮೇಲೆ ಹಂಬಂಟೋಟಾ ಬಂದರನ್ನು ಚೀನಾಗೆ 99 ವರ್ಷಗಳವರೆಗೆ ಶ್ರೀಲಂಕಾ ಸರ್ಕಾರ ಗುತ್ತಿಗೆ ನೀಡಿದೆ. * ಹಂಬಂಟೋಟಾ ಬಂದರಿನ ಮೇಲೆ ಚೀನಾ ಮಾಲೀಕತ್ವವನ್ನು ಪಡೆದುಕೊಂಡಿದೆ. * ಈ ನೌಕೆ ಸಂಶೋಧನಾ ನೌಕೆಯಾಗಿರದೇ ಮಿಲಿಟರಿ ಗುಪ್ತಚರ ನೌಕೆ ಎಂಬುದು ಭಾರತಕ್ಕೆ ಅನುಮಾನ ಬರುವಂತೆ ಮಾಡಿದೆ.