Job Description: * ಅಂತಾರಾಷ್ಟ್ರೀಯ ಫುಟ್‌ ಬಾಲ್ನ ಜಾಗತಿಕ ಮಂಡಳಿ (FIFA) ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಅನ್ನು ಅಮಾನತುಗೊಳಿಸಿದೆ.* AIFF ನ ವ್ಯವಹಾರಗಳಲ್ಲಿ “ಮೂರನೇ ವ್ಯಕ್ತಿಯ ಹಸ್ತಕ್ಷೇಪ” ದಿಂದಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಫಿಫಾ ತಿಳಿಸಿದೆ.* ಬ್ಯೂರೊ ಆಫ್ ಫಿಫಾ (FIFA) ಕೌನ್ಸಿಲ್‍ನಲ್ಲಿ ಈ ಸಂಬಂಧ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದ್ದು, ಅದರಂತೆ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅನ್ನು ತಕ್ಷಣ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಈ ಅಮಾನತಿನೊಂದಿಗೆ FIFA U-17 ಮಹಿಳಾ ವಿಶ್ವಕಪ್ 2022 ಆಯೋಜಿಸುವ ಭಾರತದ ಕನಸು ಕೂಡ ಇವಾಗ ಇಲ್ಲದಂತಾಗಿದೆ.* ಇದೀಗ ಭಾರತ ಅಂಡರ್ 17 ಮಹಿಳಾ ವಿಶ್ವಕಪ್ ಆಯೋಜಿಸುವ ಹೊಸ್ತಿಲಲ್ಲಿ ಫಿಫಾ ಭಾರತೀಯ ಫುಟ್ಬಾಲ್ ಫೆಡರೇಷನ್ನ್ನು ಅಮಾನತುಗೊಳಿಸಿದೆ. ಎಐಎಫ್‌ಎಫ್‌ನ ವ್ಯವಹಾರಗಳಲ್ಲಿ ಹೊರಗಿನ ವ್ಯಕ್ತಿಗಳ ಅಥವಾ ಇನ್ನಿತರ ಅಧಿಕಾರಿಗಳ ನೇರ ಹಸ್ತಕ್ಷೇಪ ಕಂಡು ಬಂದಿದೆ. * ಅದರಲ್ಲೂ ಫಿಫಾ ಚುನಾವಣಾ ವಿಷಯ ಸುಪ್ರೀಂ ಕೋರ್ಟ್ನಲ್ಲಿದೆ. ಈ ವಿಚಾರವಾಗಿ ಭಾರತೀಯ ಫುಟ್ಬಾಲ್ ಸಂಸ್ಥೆಯನ್ನು ನಿಯಂತ್ರಿಸಲು ನ್ಯಾಯಾಲಯ ಆಡಳಿತಗಾರರ ಸಮಿತಿ ರಚಿಸಿದೆ. * ಈ ಎಲ್ಲಾ ಕಾರಣಗಳಿಂದ ಫಿಫಾ ಭಾರತೀಯ ಫುಟ್ಬಾಲ್ ಫೆಡರೇಶನ್ ಅನ್ನು ಅಮಾನತು ಮಾಡುವ ನಿರ್ಧಾರಕ್ಕೆ ಬಂದಿದೆ.* ಈ ಬಾರಿ ಭಾರತದಲ್ಲೇ FIFA U-17 ಮಹಿಳಾ ವಿಶ್ವಕಪ್ 2022 ನಡೆಯಬೇಕಿತ್ತು. ಇದೀಗ ಅಮಾನತು ಮೂಲಕ ಭಾರತದ ಆತಿಥ್ಯವನ್ನು ಕಸಿದುಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ಅಕ್ಟೋಬರ್ನಲ್ಲಿ ನಡೆಯಲಿರುವ ಅಂಡರ್ 17 ವಿಶ್ವಕಪ್ನಲ್ಲಿ ಭಾರತದ ಮಹಿಳಾ ತಂಡಕ್ಕೆ ಅವಕಾಶವನ್ನು ನಿಷೇಧಿಸಲಾಗಿದೆ. * ವಿಶ್ವ ಫುಟ್ಬಾಲ್ ಅನ್ನು ನಿಯಂತ್ರಿಸುವ ಫಿಫಾ ನಿರ್ಧಾರವನ್ನು ಏಷ್ಯನ್ ಫುಟ್ಬಾಲ್ ಒಕ್ಕೂಟ ಕೂಡ ಅಂಗೀಕರಿಸಲಿದೆ. ಇದರಿಂದ 2023 ರಲ್ಲಿ ನಡೆಯಲಿರುವ ಏಷ್ಯಾಕಪ್ ಫುಟ್ಬಾಲ್ನಿಂದ ಕೂಡ ಭಾರತ ಹೊರಬೀಳಲಿದೆ.