Job Description: * ಭಾರತದಲ್ಲಿ ಮೊದಲ ಭಾರಿಗೆ ಹೈದರಾಬಾದ್ ನಗರದ ವಿಜ್ಞಾನಿಗಳು ಹಾಗೂ ಸಂಶೋಧಕರು ತ್ರಿ–ಡಿ ಮುದ್ರಿತ ಕೃತಕ ಕಾರ್ನಿಯಾ ಅಭಿವೃದ್ಧಿಪಡಿಸಿದ್ದಾರೆ. * ವಿಜ್ಞಾನಿಗಳು ಹಾಗೂ ಸಂಶೋಧಕರು ತ್ರಿ–ಡಿ ಮುದ್ರಿತ ಕೃತಕ ಕಾರ್ನಿಯಾವನ್ನು ಮೊಲದ ಕಣ್ಣಿಗೆ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. * ಎಲ್‌.ವಿ.ಪ್ರಸಾದ್‌ ನೇತ್ರ ಸಂಸ್ಥೆ (ಎಲ್‌ವಿಪಿಇಐ), ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ–ಹೈದರಾಬಾದ್‌ (ಐಐಟಿಹೆಚ್‌) ಹಾಗೂ ಸೆಂಟರ್‌ ಫಾರ್‌ ಸೆಲ್ಯೂಲರ್‌ ಅಂಡ್ ಮೊಲಿಕ್ಯುಲರ್‌ ಬಯಾಲಜಿ (ಸಿಸಿಎಂಬಿ) ಸಂಸ್ಥೆಯ ಸಂಶೋಧಕರು ವ್ಯಕ್ತಿಯೊಬ್ಬರು ದಾನ ಮಾಡಿದ್ದ ಕಾರ್ನಿಯಲ್‌ ಅಂಗಾಂಶದಿಂದ ತ್ರಿ–ಡಿ ಮುದ್ರಿತ ಕೃತಕ ಕಾರ್ನಿಯಾವನ್ನು ಅಭಿವೃದ್ಧಿಪಡಿಸಿದ್ದಾರೆ* ಎಲ್‌ವಿಪಿಇಐ, ಐಐಟಿಹೆಚ್‌ ಮತ್ತುಸಿಸಿಎಂಬಿಯ ಸಂಶೋಧಕರು ಡಿಸೆಲ್ಯುಲರೈಸ್ಡ್ ಕಾರ್ನಿಯಲ್ ಟಿಶ್ಯೂ ಮ್ಯಾಟ್ರಿಕ್ಸ್ ಮತ್ತು ಮಾನವನ ಕಣ್ಣಿನಿಂದ ಪಡೆದ ಕಾಂಡಕೋಶಗಳನ್ನು ಬಳಸಿ ವಿಶಿಷ್ಟವಾದ ಬಯೋಮಿಮೆಟಿಕ್ ಹೈಡ್ರೋಜೆಲ್ ಅನ್ನು ಅಭಿವೃದ್ಧಿಪಡಿಸಲು ಬಳಸಲಾಗುತ್ತದೆ.* ಈ ಕಾರ್ನಿಯಾ ತಯಾರಿಕೆಗಾಗಿ 'ಬಯೊ ಇಂಕ್‌' ಬಳಸಲಾಗಿದೆ.* ಕಾರ್ನಿಯಲ್‌ ಸ್ಕೇರಿಂಗ್‌ ಮತ್ತು ಕೆರಾಟೊಕೊನಸ್‌ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನೂ ಗಮನದಲ್ಲಿಟ್ಟುಕೊಂಡು ತ್ರಿ–ಡಿ ಮುದ್ರಿತ ಕೃತಕ ಕಾರ್ನಿಯಾವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ್ದೇವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.