Job Description: * ಪಾರ್ಸಿ(Parsi) ಸಮುದಾಯವು ಆಗಸ್ಟ್ 16 ರಂದು ಪಾರ್ಸಿ ಹೊಸ ವರ್ಷವನ್ನು (Parsi New Year) ಆಚರಿಸಲಾಗುತ್ತದೆ. ಇದನ್ನು ನವ್ರೋಜ್ ಎಂದೂ ಕರೆಯುತ್ತಾರೆ.* ಇದು ಜೊರಾಸ್ಟ್ರಿಯನ್ ಕ್ಯಾಲೆಂಡರ್‌ನ ಮೊದಲ ದಿನವಾಗಿದ್ದು, ಹೊಸ ವರ್ಷವನ್ನಾಗಿ ಆಚರಿಸಲಾಗುತ್ತದೆ, ಇದನ್ನು ಶಾಹೆನ್‌ಶಾಹಿ ಕ್ಯಾಲೆಂಡರ್ ಎಂದೂ ಸಹ ಕರೆಯುತ್ತಾರೆ.* ಈ ದಿನದಂದು, ಭಾರತದಾದ್ಯಂತ ಪಾರ್ಸಿ ಕುಟುಂಬಗಳು ಪ್ರಾರ್ಥನೆ ಸಲ್ಲಿಸಲು ತಮ್ಮ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ವಿವಿಧ ಆಹಾರಗಳನ್ನು ಸಹ ತಯಾರಿಸಲಾಗುತ್ತದೆ. * ಪಾರ್ಸಿ ಹೊಸ ವರ್ಷದ ಆರಂಭವು ಸುಮಾರು 35,000 ವರ್ಷಗಳ ಹಿಂದಿನದು ಎಂದು ಹೇಳಲಾಗುತ್ತದೆ. ಪ್ರವಾದಿ ಜರಾತುಸ್ತ್ರರು ಇರಾನ್‌ನ ಪರ್ಷಿಯಾದಲ್ಲಿ ಝೋರಾಸ್ಟ್ರಿಯನ್ ಧರ್ಮವನ್ನು ಸ್ಥಾಪಿಸಿದ ಸಮಯ ಇದಾಗಿದ್ದು, ಈ ಸಮಯದಿಂದ ಪಾರ್ಸಿ ಹೊಸ ವರ್ಷವನ್ನು ಆಚರಿಸಲಾಗುತ್ತದೆ.* ಜೊರಾಸ್ಟ್ರಿಯನ್ ತತ್ವಶಾಸ್ತ್ರದ ಪ್ರಕಾರ ಈ ದಿನವು ವಿಶ್ವದಲ್ಲಿರುವ ಎಲ್ಲದರ ವಾರ್ಷಿಕ ನವೀಕರಣ ಮಾಡುವ ದಿನವಾಗಿದೆ. * ನವ್ರೋಜ್ ಎಂಬ ಪದವು ಪಾರ್ಸಿ ಕ್ಯಾಲೆಂಡರ್ ಅನ್ನು ಪರಿಚಯಿಸಿದ ಎಂದು ನಂಬಲಾಗುವ ಪುರಾತನ ಸಸಾನಿಯನ್ ರಾಜ ಜಮ್ಶೆಡ್ಗೆ ಸಂಬಂಧಪಟ್ಟಿದ್ದು ಎನ್ನಲಾಗುತ್ತದೆ. ಹೀಗಾಗಿ, ಈ ಹಬ್ಬವನ್ನು ಜಮ್ಶೆಡ್-ಇ-ನೂರೋಜ್ ಎಂದೂ ಸಹ ಕರೆಯುತ್ತಾರೆ.* ಪಾರ್ಸಿ ಹೊಸ ವರ್ಷವನ್ನು ಜೊರಾಸ್ಟ್ರಿಯನ್ ಕ್ಯಾಲೆಂಡರ್‌ನ ಮೊದಲ ತಿಂಗಳ ಫರ್ವರ್ಡಿನ್‌ನ ಮೊದಲ ದಿನದಂದು ಆಚರಿಸಲಾಗುತ್ತದೆ. ಈ ದಿನ ವಾರ್ಷಿಕ ವಸಂತ ವಿಷುವತ್ ಸಂಕ್ರಾಂತಿಯ ಪ್ರಾರಂಭದ ಸಂಕೇತವಾಗಿದೆ.