Job Description: * ಇತ್ತೀಚಿಗೆ ವಿಶ್ವ ಸಂಸ್ಥೆಯ ಭಾರತದ ಮೊದಲ ಮಹಿಳಾ ಕಾಯಂ ಪ್ರತಿನಿಧಿಯಾಗಿ ರಾಯಭಾರಿ ರುಚಿರಾ ಕಂಬೋಜ(58) ಅವರು ಅಧಿಕಾರ ಸ್ವೀಕರಿಸಿದರು.* ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿಯಾಗಿ ಹಿರಿಯ ರಾಜತಾಂತ್ರಿಕ ರುಚಿರಾ ಕಾಂಬೋಜ್ ಅವರನ್ನು ನೇಮಿಸಲಾಗಿದೆ.* ರುಚಿರಾ ಕಾಂಬೋಜ್ 1987 ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್‌) ಅಧಿಕಾರಿ, ಪ್ರಸ್ತುತ ಭೂತಾನ್‌ಗೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.* ರುಚಿರಾ ಕಾಂಬೋಜ್ ಅವರು ಭೂತಾನ್‌ಗೆ ಭಾರತದ ಮೊದಲ ಮಹಿಳಾ ರಾಯಭಾರಿಯಾಗಿದ್ದಾರೆ.* ಅವರು 1987 ರ ಸಿವಿಲ್ ಸರ್ವಿಸಸ್ ಬ್ಯಾಚ್‌ನ ಅಖಿಲ ಭಾರತ ಮಹಿಳಾ ಟಾಪರ್ ಮತ್ತು 1987 ರ ವಿದೇಶಿ ಸೇವಾ ಬ್ಯಾಚ್‌ನ ಟಾಪರ್ ಆಗಿದ್ದರು.* ರುಚಿರಾ ಕಾಂಬೋಜ್ ಅವರು 2002-2005 ರಿಂದ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಗೆ ಭಾರತದ ಖಾಯಂ ಮಿಷನ್‌ನಲ್ಲಿ ಸಲಹೆಗಾರರಾಗಿ ನೇಮಕಗೊಂಡರು.* ಡಿಸೆಂಬರ್ 2014 ರಲ್ಲಿ ಸೆಕ್ರೆಟರಿ ಜನರಲ್ ಕೋಫಿ ಅನ್ನಾನ್ ಅವರ ಬ್ಲೂ ರಿಬ್ಬನ್ ಪ್ಯಾನೆಲ್ ವರದಿಯನ್ನು ಬಿಡುಗಡೆ ಮಾಡಿದ ನಂತರ, ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಮತ್ತು ವಿಸ್ತರಣೆಯಲ್ಲಿ ಕೆಲಸ ಮಾಡಿದ ಜಿ 4 ತಂಡದ ಭಾಗವಾಗಿದ್ದರು. ಸದ್ಯ ಅದು ಇನ್ನೂ ಪ್ರಗತಿಯಲ್ಲಿದೆ. * 2006- 2009 ರವರೆಗೆ, ಅವರು ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿದ್ದರು.* ಟಿ. ಎಸ್. ತಿರುಮೂರ್ತಿ ಅವರಿಂದ ತೆರವಾದ ಸ್ಥಾನಕ್ಕೆ ರುಚಿರಾ ಕಂಬೋಜ ಅವರು ಆಯ್ಕೆಯಾಗಿದ್ದಾರೆ.