Job Description: * ದೆಹಲಿ ನೂತನ ಪೊಲೀಸ್ ಕಮಿಷನರ್ ರಾಗಿ ಹೊಸದಾಗಿ ಸಂಜಯ್ ಅರೋರಾ ಅವರನ್ನು ನೇಮಕ ಮಾಡಲಾಗಿದೆ. * ಸಂಜಯ್ ಅರೋರಾ ಅವರು ತಮಿಳುನಾಡು ಕೇಡರ್‌ನ ಭಾರತೀಯ ಪೊಲೀಸ್ ಸೇವೆ(IPS) ಅಧಿಕಾರಿಯಾಗಿದ್ದಾರೆ. ಸದ್ಯ ದೆಹಲಿ ನೂತನ ಪೊಲೀಸ್ ಕಮಿಷನರ್ ರಾಗಿ ನೇಮಕಗೊಂಡಿದ್ದಾರೆ* ಸಂಜಯ್ ಅರೋರಾ ಅವರು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ITBP) ಡೈರೆಕ್ಟರ್ ಜನರಲ್ ಹುದ್ದೆಯನ್ನು ಆಗಸ್ಟ್ 1 ರಂದು ತೊರೆಯಲಿದ್ದು ಅವರು ಕೇಂದ್ರ ಗೃಹ ಸಚಿವಾಲಯದ ಪ್ರಕಾರ ಮುಂದಿನ ಆದೇಶದವರೆಗೆ ದೆಹಲಿ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಲಿದ್ದಾರೆ.* ಸಂಜಯ್ ಅರೋರಾ ಅವರ ರಾಜೀನಾಮೆಯ ನಂತರ ಮಹಾನಿರ್ದೇಶಕರಾದ ಎಸ್‌ ಎಲ್ ಥಾಸೆನ್ ಅವರು ಸದ್ಯಕ್ಕೆ ಹೆಚ್ಚುವರಿ ಐಟಿಬಿಪಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.* ಜೈಪುರದ ಮಾಲ್ವಿಯಾ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಸಂಜಯ್ ಅರೋರಾ ಅವರು ಪಡೆದಿದ್ದಾರೆ.* ಡಕಾಯಿಟ್ ವೀರಪ್ಪನ್ ಮತ್ತು ಅವನ ಗ್ಯಾಂಗ್ ವಿರುದ್ಧ ಕಾರ್ಯಪಡೆಯ ಭಾಗದಲ್ಲಿ ಭಾಗವಹಿಸಿದ ಕೀರ್ತಿಯು ಇವರಿಗೆ ಸಂದಿದೆ ಅದಕ್ಕಾಗಿ ಅವರು ಮುಖ್ಯಮಂತ್ರಿಗಳ ಶೌರ್ಯ ಪದಕವನ್ನು ಸಹ ಪಡೆದಿದ್ದಾರೆ.