Job Description: * ಭಾರತದ 15 ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.* ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಪ್ರಮಾಣವಚನ ಭೋದಿಸಿದರು.* ಬುಟಕಟ್ಟು ಸಮುದಾಯದ ಮೊದಲ ವ್ಯಕ್ತಿ ಹಾಗೂ ಎರಡನೇ ಮಹಿಳಾ ರಾಷ್ಟ್ರಪತಿ ಎಂಬ ಗೌರವಕ್ಕೆ ದ್ರೌಪದಿ ಮುರ್ಮು ಪಾತ್ರರಾಗಿದ್ದಾರೆ.* ಒಡಿಶಾ ಮೂಲದವರಾದ ಮುರ್ಮು ಇದಕ್ಕೂ ಮುನ್ನ ಜಾರ್ಖಂಡ್ ರಾಜ್ಯಪಾಲರೂ ಆಗಿದ್ದರು . * ಪ್ರಮಾಣ ವಚನದ ಬಳಿಕ ದ್ರೌಪದಿ ಮುರ್ಮು ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.* ಪ್ರಮಾಣ ವಚನಕ್ಕೂ ಮುನ್ನ ಸುತ್ತು ಗುಂಡು ಹಾರಾಟ ನಡೆಸಿ ಗೌರವ ವಂದನೆ ಸಲ್ಲಿಸಲಾಗುವುದು.* ರಾಷ್ಟ್ರಪತಿ ಕೋವಿಂದ್ ಅವರು ವಿದಾಯ ಭಾಷಣವನ್ನು ಮಾಡಿದರು.* ಮುಂದಿನ ತಲೆಮಾರುಗಳಿಗಾಗಿ ನಿಸರ್ಗವನ್ನು ರಕ್ಷಿಸುವಂತೆ ಅವರು ಕರೆ ನೀಡಿದ್ದಾರೆ.* 21 ನೇ ಶತಮಾನವನ್ನು ಭಾರತದ ಶತಮಾನವಾಗಿಸಲು ದೇಶವು ಸಜ್ಜಾಗುತ್ತಿದೆ ಎಂದು ರಾಮನಾಥ್ ಕೊವಿಂದ್ ಅವರು ತಮ್ಮ ವಿದಾಯ ಭಾಷಣದಲ್ಲಿ ಹೇಳಿದರು.