Job Description: * ನೀತಿ ಆಯೋಗವು ಬಿಡುಗಡೆ ಮಾಡಿರುವ ಭಾರತ ನಾವಿನ್ಯತಾ ಸೂಚ್ಯಂಕ 2021 ರಾಜ್ಯಕ್ಕೆ ಮೊದಲ ಸ್ಥಾನ ದೊರೆತಿದೆ. ಸತತವಾಗಿ ಮೂರು ವರ್ಷ ರಾಜ್ಯಕ್ಕೆ ಈ ಸ್ಥಾನ ದೊರೆತಿದೆ. * ಈ ಸೂಚಂಕ್ಯದಲ್ಲಿ ಕರ್ನಾಟಕವು ಇದರಲ್ಲಿ 18.01 ಅಂಕವನ್ನು ಗಳಸಿದೆ ಹಾಗೂ ತೆಲಂಗಾಣ ಮತ್ತು ಹರಿಯಾಣಗಳು 17.66 ಮತ್ತು 16.35 ಅಂಕಗಳನ್ನು ಪಡೆದುಕೊಂಡಿವೆ ಮತ್ತು ಮೂರನೇ ಸ್ಥಾನವನ್ನು ಬಿಹಾರ,ಒಡಿಶಾ ಹಾಗೂ ಛತ್ತೀಸಗಡ ರಾಜ್ಯಗಳು ಪಡೆದುಕೊಂಡಿವೆ.* ಛತ್ತೀಸಗಡವು 10.97 ಕಡಿಮೆ ಅಂಕಗಳನ್ನು ತೆಗೆದುಕೊಂಡಿದೆ.* ಮಹಾರಾಷ್ಟ್ರ,ತಮಿಳುನಾಡು,ಪಂಜಾಬ್,ಉತ್ತರ ಪ್ರದೇಶ, ಕೇರಳ, ಆಂಧ್ರಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ್, ರಾಜಸ್ಥಾನ್,ಮಧ್ಯಪ್ರದೇಶ,ಗುಜರಾತ್ ರಾಜ್ಯಗಳು ಈ ಪ್ರಮುಖ ಪಟ್ಟಿಯಲ್ಲಿ ಇವೆ.* ಚಂಡೀಗಡಕ್ಕೆ ಕೇಂದ್ರಾಡಳಿತ ಮತ್ತು ನಗರ ರಾಜ್ಯಗಳ ಪಟ್ಟಿಯಲ್ಲಿ 27 .88 ಅಂಕಗಳನ್ನು ಪಡೆದುಕೊಂಡು ಅಗ್ರ ಸ್ಥಾನದಲ್ಲಿದೆ ನಂತರದ ಸ್ಥಾನದಲ್ಲಿ ನವದೆಹಲಿಯು 27 .00 ಅಂಕಗಳನ್ನು ಹಾಗೂ ಅಂಡಮಾನ್ ಮತ್ತು ನಿಕೊಬಾರ್ 17 .29 ಅಂಕಗಳನ್ನು ತೆಗೆದುಕೊಂಡಿವೆ.* ಈ ಪಟ್ಟಿಯಲ್ಲಿ ಪುದುಚೇರಿ,ಗೋವಾ,ಜಮ್ಮುಮತ್ತು ಕಾಶ್ಮೀರ,ದಾದ್ರಾ-ನಗರ ಹವೇಲಿ ಮತ್ತು ಡಿಯು-ದಾಮನ್,ಲಕ್ಷ ದ್ವೀಪ ಮತ್ತು ಲಡಾಕ್ ರಾಜ್ಯಗಳು ಇವೆ.* ಮಣಿಪುರ್ ಈಶಾನ್ಯ ಮತ್ತು ಗುಡ್ಡಗಾಡು ಪ್ರದೇಶದ ರಾಜ್ಯಗಳ ಪಟ್ಟಿಯಲ್ಲಿ 19 .37 ಅಂಕಗಳನ್ನು ತೆಗೆದುಕೊಂಡು ಮೊದಲ ಸ್ಥಾನದಲ್ಲಿದೆ.* ಎರಡರಿಂದ 10 ನೇ ಸ್ಥಾನಗಳಲ್ಲಿ ಉತ್ತರಾಖಂಡ್, ಮೇಘಾಲಯ, ಅರುಣಾಚಲಪ್ರದೇಶ, ಸಿಕ್ಕಿಂ, ಮಿಜೋರಾಂ, ತ್ರಿಪುರ, ಅಸ್ಸಾಂ, ಮತ್ತು ನಾಗಾಲ್ಯಾಂಡ್ ರಾಜ್ಯಗಳು ಇವೆ.* ಈ ಸೂಚಂಕ್ಯದ ಉದ್ದೇಶವು ದೇಶದ ವಿವಿಧ ನಾವಿನ್ಯತ ಸಾಮರ್ಥ್ಯ ಪರೀಕ್ಷಿಸುವುದು ಆಗಿದೆ ಹಾಗೂ ಪರಿಸರ ವ್ಯವಸ್ಥೆ ಮತ್ತು ಹೊಸತನವನ್ನು ಪ್ರೋತ್ಸಾಹಿಸುವುದು ಆಗಿದೆ.