Job Description: * ದ್ರೌಪದಿ ಮುರ್ಮ ಭಾರತದ 15 ನೇ ರಾಷ್ಟ್ರಪತಿ ಆಗಿ ಆಯ್ಕೆಯಾಗಿದ್ದಾರೆ.* ಮುರ್ಮು ಅವರು ದೇಶದ ಉನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಯನ್ನು ಲಂಕರಿಸಿದ ಬುಡಕಟ್ಟು ಜನಾಂಗದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.* ಮುರ್ಮು ಅವರು ಸಂತಾಲಿಗಳು ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಿಂದ ಬಂದ ಬುಡಕಟ್ಟು ಜನಾಂಗದವರು ಮಯೂರ್‌ಭಂಜ್ ಜಿಲ್ಲೆಯ ಉಪರಭೇದ ಗ್ರಾಮದಲ್ಲಿ ಸಂತಾಲ ಬುಡಕಟ್ಟು ಸಮುದಾಯದಲ್ಲಿ ಜನಿಸಿದ್ದಾರೆ.* ಮುರ್ಮು ಅವರು ಜುಲೈ 25 ರಾಷ್ಟ್ರಪತಿಯಾಗಿ ಅಧಿಕಾರವನ್ನು ಸ್ವೀಕರಿಸಲಿದ್ದಾರೆ * ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ ಮುರ್ಮುವರು ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕರಾದರು. ಆಕೆಯ ತಂದೆ ಮತ್ತು ಅಜ್ಜ ಇಬ್ಬರೂ ಪಂಚಾಯತ್ ರಾಜ್ ವ್ಯವಸ್ಥೆಯಡಿ ಗ್ರಾಮದ ಮುಖ್ಯಸ್ಥರಾಗಿದ್ದರು* ದ್ರೌಪದಿ ಮುರ್ಮು 1997 ರಲ್ಲಿ ರಾಯಿರಂಗಪುರ ಪುರಸಭೆಯ ಸದಸ್ಯರಾದರು ನಂತರ ಅಧ್ಯಕ್ಷರಾಗಿ ಆಯ್ಕೆಯಾದರು.* 2000 ರಲ್ಲಿ ಅವರು ರಾಯಿರಂಗಪುರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಬಿಜು ಜನತಾ ದಳ (ಬಿಜೆಡಿ)-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ರಾಜ್ಯ ಸಚಿವರಾದರು. ಅವರು 2005 ರವರೆಗೆ ವಾಣಿಜ್ಯ ಮತ್ತು ಸಾರಿಗೆ, ಮತ್ತು ನಂತರ ಪಶುಸಂಗೋಪನೆ ಮತ್ತು ಮೀನುಗಾರಿಕೆಯಂತಹ ಖಾತೆಗಳನ್ನು ಹೊಂದಿದ್ದರು. 2007 ರಲ್ಲಿ ಒಡಿಶಾ ವಿಧಾನಸಭೆಯಲ್ಲಿ ಉತ್ತಮ ಶಾಸಕರಾಗಿ ನೀಡುವ ನೀಲಕಂಠ ಪ್ರಶಸ್ತಿಗೂ ಮುರ್ಮು ಭಾಜನರಾಗಿದ್ದಾರೆ.* 2015 ರಲ್ಲಿ ಮುರ್ಮು ಜಾರ್ಖಂಡ್‌ನ ರಾಜ್ಯಪಾಲರಾಗಿ ನೇಮಕಗೊಂಡರು. ಜಾರ್ಖಂಡ್ ಗವರ್ನರ್ ಆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.* ಅಧಿಕಾರದಲ್ಲಿದ್ದಾಗ, ಅವರು ಚೋಟಾನಾಗ್‌ಪುರ ಟೆನೆನ್ಸಿ ಆಕ್ಟ್ 1908 ಮತ್ತು ಸಂತಾಲ್ ಪರಗಣ ಟೆನೆನ್ಸಿ ಆಕ್ಟ್ 1949 ಎಂಬ ಎರಡು ಮಸೂದೆಗಳ ಅಂಗೀಕಾರಕ್ಕೆ ನಿರಾಕರಿಸಿದರು. ಇದು ಭೂಮಿಯ ಹಕ್ಕುಗಳನ್ನು ಬದಲಾಯಿಸದೆ ವಾಣಿಜ್ಯ ಉದ್ದೇಶಕ್ಕಾಗಿ ಭೂಮಿಯನ್ನು ಬಳಸಲು ಪ್ರಯತ್ನಿಸುವ ಮಸೂದೆಯಾಗಿದೆ.* ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರು ಯಶವಂತ ಸಿನ್ಹಾ ಅವರ ವಿರುದ್ಧಗೆದ್ದರು.