Job Description: * ಟಿ20 ಕ್ರಿಕೆಟ್ನಲ್ಲಿ ಹಲವು ಬೌಲರ್ಗಳು ಹ್ಯಾಟ್ರಿಕ್ ವಿಕೆಟ್ಗಳನ್ನು ಪಡೆದಿದ್ದಾರೆ. ಆದರೆ ಇದುವರೆಗೆ ಯಾವುದೇ ಬೌಲರ್ ತನ್ನ ಮೊದಲ ಓವರ್ನಲ್ಲೇ 3 ವಿಕೆಟ್ ಉರುಳಿಸಿದ ನಿದರ್ಶನವಿಲ್ಲ. ಆದರೀಗ ತಾನೆಸೆದ ಮೊದಲ ಓವರ್ನಲ್ಲೇ 3 ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ನ ಯುವ ಆಲ್ರೌಂಡರ್ ಮೈಕೆಲ್ ಬ್ರೇಸ್ವೆಲ್ ಹೊಸ ಇತಿಹಾಸ ಬರೆದಿದ್ದಾರೆ. * ಐರ್ಲೆಂಡ್ ವಿರುದ್ದ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿತು. * ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಐರ್ಲೆಂಡ್ ತಂಡವು ಹಂತದಲ್ಲಿ ಉತ್ತಮ ಸ್ಥಿತಿಯಲ್ಲೇ ಇತ್ತು. ಆದರೆ ಯಾವಾಗ ಮೈಕೆಲ್ ಬ್ರೇಸ್ವೆಲ್ ಚೆಂಡನ್ನು ಕೈಗೆತ್ತಿಕೊಂಡರೋ, ಇಡೀ ಪಂದ್ಯದ ಚಿತ್ರಣ ಬದಲಿಸಿದರು. ತಮ್ಮ ವೃತ್ತಿಜೀವನದ ಎರಡನೇ ಟಿ20 ಪಂದ್ಯವಾಡುತ್ತಿರುವ ಬ್ರೇಸ್ವೆಲ್ 14ನೇ ಓವರ್ ಎಸೆಯಲು ಬಂದರು. ತಮ್ಮ ವೃತ್ತಿಜೀವನ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ನೀಡಿದರು. ನಂತರ ಎರಡನೇ ಎಸೆತದಲ್ಲಿ ರನ್ ಓಡಿದರು. * ಮೂರನೇ ಎಸೆತದಲ್ಲಿ ಡೀಪ್ ಮಿಡ್‌ವಿಕೆಟ್‌ನಲ್ಲಿ ಫಿಲಿಪ್‌ಗೆ ಕ್ಯಾಚಿತ್ತು ಮಾರ್ಕ್ ಆಡೈರ್ ಹೊರನಡೆದರು. ಮುಂದಿನ ಎಸೆತದಲ್ಲಿ ಮ್ಯಾಗರ್ತಿ ಕೂಡ ಫಿಲಿಪ್ ಕೈಗೆ ಕ್ಯಾಚ್ ನೀಡಿದರು. * ಇನ್ನು 5ನೇ ಎಸೆತದಲ್ಲಿ ಕ್ರೇಗ್ ಯಂಗ್ ಇಶ್ ಸೋಧಿಗೆ ಕ್ಯಾಚ್ ನೀಡುವ ಮೂಲಕ ಹೊರನಡೆದರು. * * ಮೈಕೆಲ್ ಬ್ರೇಸ್‌ವೆಲ್ ಎಂಬಾತ : - * ಮೈಕೆಲ್ ಬ್ರೇಸ್‌ವೆಲ್ ನ್ಯೂಜಿಲೆಂಡ್ ಕ್ರಿಕೆಟಿಗ, ಅವರು ವೆಲ್ಲಿಂಗ್ಟನ್ ಪರ ಆಡುತ್ತಾರೆ. * ಅವರು ಮಾಜಿ ಟೆಸ್ಟ್ ಆಟಗಾರರಾದ ಬ್ರೆಂಡನ್ ಮತ್ತು ಜಾನ್ ಬ್ರೇಸ್‌ವೆಲ್ ಅವರ ಸೋದರಳಿಯ ಮತ್ತು ಪ್ರಸ್ತುತ ಅಂತರರಾಷ್ಟ್ರೀಯ ಆಟಗಾರ ಡೌಗ್ ಬ್ರೇಸ್‌ವೆಲ್ ಅವರ ಸೋದರಸಂಬಂಧಿ. * ಅವರು ಮಾರ್ಚ್ 2022 ರಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕಾಗಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು.