Job Description: * ಭಾರತ ಸರ್ಕಾರ ಮತ್ತು ನಮೀಬಿಯಾ ಗಣರಾಜ್ಯ ಸರ್ಕಾರವು ವನ್ಯಜೀವಿ ಸಂರಕ್ಷಣೆ ಮತ್ತು ಸುಸ್ಥಿರ ಜೀವವೈವಿಧ್ಯ ಬಳಕೆಯ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿವೆ * ಜಾಗತಿಕ ಸಂರಕ್ಷಣಾ ಪ್ರಯತ್ನಗಳಿಗೆ ಕೊಡುಗೆ ನೀಡುವ ಐತಿಹಾಸಿಕ ವಿಕಸನೀಯ ಸಮತೋಲನ ಮರುಸ್ಥಾಪಿಸಲು ಭಾರತದಲ್ಲಿ ಚಿರತೆ ಮರುಪರಿಚಯ ಯೋಜನೆ*ಭಾರತ ಮತ್ತು ನಮೀಬಿಯಾ ನಡುವೆ ಪರಸ್ಪರ ಗೌರವ, ಸಾರ್ವಭೌಮತ್ವ, ಸಮಾನತೆ ಮತ್ತು ಉತ್ತಮ ಹಿತಾಸಕ್ತಿಯ ತತ್ವಗಳ ಆಧಾರದ ಮೇಲೆ ವನ್ಯಜೀವಿ ಸಂರಕ್ಷಣೆ ಮತ್ತು ಸುಸ್ಥಿರ ಜೀವವೈವಿಧ್ಯ ಬಳಕೆ ಉತ್ತೇಜಿಸಲು ಮತ್ತು ಪರಸ್ಪರ ಪ್ರಯೋಜನಕಾರಿ ಸಂಬಂಧ ಅಭಿವೃದ್ಧಿಪಡಿಸಲು ತಿಳಿವಳಿಕೆ ಪತ್ರವು ಅನುವು ಮಾಡಿಕೊಡುತ್ತದೆ. * * ತಿಳಿವಳಿಕೆ ಒಪ್ಪಂದದ ಮುಖ್ಯ ಅಂಶಗಳು :- ಅಳಿವಿನಂಚಿನಲ್ಲಿರುವ ಚಿರತೆಗಳು ನೆಲೆಸಿದ್ದ ಹಿಂದಿನ ಪ್ರದೇಶಗಳಲ್ಲೇ ಅವುಗಳ ಸಂರಕ್ಷಣೆ ಮತ್ತು ಮರುಸ್ಥಾಪನೆಯ ಮೇಲೆ ನಿರ್ದಿಷ್ಟ ಗಮನ ಹೊಂದಿರುವ ಜೀವವೈವಿಧ್ಯ ಸಂರಕ್ಷಣೆ.- ಎರಡೂ ದೇಶಗಳಲ್ಲಿ ಚಿರತೆಯ ಸಂರಕ್ಷಣೆ ಉತ್ತೇಜಿಸುವ ಗುರಿ ಹೊಂದಿರುವ ಪರಿಣತಿ ಮತ್ತು ಸಾಮರ್ಥ್ಯಗಳ ಹಂಚಿಕೆ ಮತ್ತು ವಿನಿಮಯ.- ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ವನ್ಯಜೀವಿ ಸಂರಕ್ಷಣೆ ಮತ್ತು ಸುಸ್ಥಿರ ಜೀವವೈವಿಧ್ಯದ ಬಳಕೆ.- ತಾಂತ್ರಿಕ ಆನ್ವಯಿಕಗಳು (ಉಪಯೋಗಗಳು ಅಥವಾ ಪ್ರಯೋಜನಗಳು), ವನ್ಯಜೀವಿ ಆವಾಸ ಸ್ಥಾನಗಳಲ್ಲಿ ವಾಸಿಸುವ ಸ್ಥಳೀಯ ಸಮುದಾಯಗಳಿಗೆ ಜೀವನೋಪಾಯ ಸೃಷ್ಟಿಸುವ ಕಾರ್ಯವಿಧಾನಗಳು ಮತ್ತು ಜೈವಿಕ ವೈವಿಧ್ಯದ ಸಮರ್ಥ ನಿರ್ವಹಣೆ.- ಹವಾಮಾನ ಬದಲಾವಣೆ, ಪರಿಸರ ಆಡಳಿತ, ಪರಿಸರ ಪ್ರಭಾವದ ಮೌಲ್ಯಮಾಪನಗಳು, ಮಾಲಿನ್ಯ ಮತ್ತು ತ್ಯಾಜ್ಯ ನಿರ್ವಹಣೆ ಹಾಗೂ ಪರಸ್ಪರ ಆಸಕ್ತಿಯ ಇತರ ಕ್ಷೇತ್ರಗಳಲ್ಲಿ ಸಹಯೋಗ.- ತಾಂತ್ರಿಕ ಪರಿಣತಿ ಹಂಚಿಕೊಳ್ಳುವುದು ಸೇರಿದಂತೆ ವನ್ಯಜೀವಿ ನಿರ್ವಹಣೆಯಲ್ಲಿ ತರಬೇತಿ ಮತ್ತು ಶಿಕ್ಷಣಕ್ಕಾಗಿ ಸಿಬ್ಬಂದಿ ವಿನಿಮಯ. * 2010 ಮತ್ತು 2012ರ ನಡುವೆ 10 ಅರಣ್ಯ ತಾಣಗಳಲ್ಲಿ ಸಮೀಕ್ಷೆ ನಡೆಸಲಾಯಿತು. ಜನಸಂಖ್ಯಾಶಾಸ್ತ್ರ, ತಳಿಶಾಸ್ತ್ರ, ಸಂಘರ್ಷ ಮತ್ತು ಜೀವನೋಪಾಯಗಳ ಸಾಮಾಜಿಕ-ಆರ್ಥಿಕತೆಯ ಪ್ರಕಾರ ಚಿರತೆ ಸಂತತಿಯನ್ನು ಮರುಪರಿಚಯಿಸುವ ಕಾರ್ಯಸಾಧ್ಯತೆಗಳಿಗೆ ಅನುಗುಣವಾಗಿ, ಪ್ರಕೃತಿ ಸಂರಕ್ಷಣೆಯ ಅಂತಾರಾಷ್ಟ್ರೀಯ ಒಕ್ಕೂಟ(ಐಯುಸಿಎನ್)ದ ಮಾರ್ಗಸೂಚಿಗಳ ಆಧಾರದ ಮೇಲೆ, ಭಾರತದಲ್ಲಿ ಚಿರತೆಯ ಸಂತತಿ ಸ್ಥಾಪಿಸುವ ಕಾರ್ಯಸಾಧ್ಯತೆಯ ಸಂಭಾವ್ಯ ತಾಣಗಳ ಮೌಲ್ಯಮಾಪನ ಮಾಡಲಾಗಿದೆ. * ದಕ್ಷಿಣ ಆಫ್ರಿಕಾದಲ್ಲಿ (ದಕ್ಷಿಣ ಆಫ್ರಿಕಾ, ನಮೀಬಿಯಾ, ಬೋಟ್ಸ್ ವಾನಾ ಮತ್ತು ಜಿಂಬಾಬ್ವೆ) ನೆಲೆಸಿರುವ ಚಿರತೆ ಸಂತತಿಯ ಸ್ಥಳಗಳ ಪೂರಕ ಪರಿಸರ, ಹವಾಮಾನ ಪರಿಸ್ಥಿತಿಗಳ ಜತೆಗೆ ಉಷ್ಣಾಂಶ ಮಾದರಿಗಳನ್ನು ಭಾರತದಲ್ಲಿ ಸಮಾನವಾದ ಸ್ಥಾಪಿತ ಸ್ಥಳವನ್ನು ರೂಪಿಸಲು ಬಳಸಲಾಗಿದೆ. ದಕ್ಷಿಣ ಆಫ್ರಿಕಾದ ಚಿರತೆಯ ಹವಾಮಾನವು ಭಾರತದಲ್ಲೂ ಇದೆ ಎಂಬುದನ್ನು ವಿಶ್ಲೇಷಣೆ ತೋರಿಸುತ್ತಿದೆ.