Job Description: * ರಿಲಯನ್ಸ್ ಜಿಯೋನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಖೇಶ್ ಅಂಬಾನಿ ಅವರು ಇದೀಗ ರಿಯಲಯ್ಸ್ ಜಿಯೋದ ನಿರ್ದೇಶಕ ಸ್ಥಾನದಿಂದ ಕೆಳಗಿಳಿದಿದ್ದಾರೆ.* ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (ಜೆಪಿಎಲ್) ನಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾದ ಹಾಗೂ ಮುಖೇಶ್ ಅಂಬಾನಿಯವರ ಜೇಷ್ಠ ಪುತ್ರ ಆಕಾಶ್ ಅಂಬಾನಿ ಅವರು ಜೂನ್ 27 ರಂದು ಜಿಯೋ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.* ಜೂನ್ 28 ರಂದು, ಜೆಪಿಎಲ್ ಕಂಪನಿಯ (ಜಿಯೋ) ಹೆಚ್ಚುವರಿ ನಿರ್ದೇಶಕರಾಗಿ ಶ್ರೀ ರಮೀಂದರ್ ಸಿಂಗ್ ಗುಜ್ರಾಲ್ ಮತ್ತು ಶ್ರೀ ಕೆ ವಿ ಚೌದರಿ ಅವರನ್ನು ನೇಮಿಸಲಾಗಿದೆ* ಜೂನ್ 27, 2022 ರಿಂದ ಪ್ರಾರಂಭವಾಗುವ ಐದು ವರ್ಷಗಳ ಅವಧಿಗೆ ಇಬ್ಬರೂ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾರೆ ಎಂದು ಘೋಷಿಸಲಾಗಿದೆ.* ಈ ಕಂಪನಿಯು 107 ರೂ.ಗೆ ಪ್ರತಿದಿನ 3GB ಡೇಟಾ, ಉಚಿತ ಕರೆ, 50 ದಿನ ವ್ಯಾಲಿಡಿಟಿಯ ಹೊಸ ಪ್ರೀಪೇಡ್ ಪ್ಲ್ಯಾನ್!* ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಮುಖೇಶ್ ಅಂಬಾನಿಯವರ ನಾಯಕತ್ವದಲ್ಲಿ ಹುಟ್ಟಿದ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಹಲವಾರು ದಾಖಲೆಗಳನ್ನು ನಿರ್ಮಿಸಿದೆ* 2016 ರಲ್ಲಿ ಸ್ಥಾಪಿತವಾಗಿ ಮೊದಲ 170 ದಿನಗಳಲ್ಲೇ 10 ಕೋಟಿ ಗ್ರಾಹಕರನ್ನು ಪಡೆದ ಹಾಗೂ ಕೇವಲ 5 ವರ್ಷಗಳಲ್ಲಿ ದೇಶದ ನಂ.1 ಟೆಲಿಕಾಂ ಕಂಪೆನಿಯಾಗಿದೆ* ಆಕಾಶ್ ಅಂಬಾನಿ ಅವರು ಬಹಳ ಸಮಯದಿಂದ ಕಂಪನಿಯ ಕಾರ್ಯನಿರ್ವಾಹಕ-ಅಲ್ಲದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಅವರ ಮೇಲೆ ಮತ್ತಷ್ಟು ನಿರೀಕ್ಷೆಯನ್ನು ಇಡಲಾಗಿದೆ.* ಬ್ರೌನ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಮೇಜರ್ ಪದವಿ ಪಡೆದಿರುವ ಆಕಾಶ್ ಅಂಬಾನಿ ಅವರು ಕಳೆದ ಕೆಲವು ವರ್ಷಗಳಲ್ಲಿ 'ಡಿಜಿಟಲ್ ಪ್ರಪಂಚದಲ್ಲಿ' ಜಿಯೋ ಮಾಡಿದ ಪ್ರಮುಖ ಸ್ವಾಧೀನಗಳನ್ನು ವೈಯಕ್ತಿಕವಾಗಿ ಮುನ್ನಡೆಸಿದ್ದಾರೆ ಮತ್ತು ಜಿಯೋ 4G ಫೀಚರ್ ಮತ್ತು ಸ್ಮಾರ್ಟ್‌ಫೋನ್, AI-ML ಮತ್ತು ಬ್ಲಾಕ್‌ಚೈನ್ ಸೇರಿದಂತೆ ಹೊಸ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯಗಳ ಅಭಿವೃದ್ಧಿಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ* ಜಿಯೋದ ಮೂಲ ಕಂಪನಿ ಹಾಗೂ ದೇಶದ ಪ್ರಮುಖ ಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ