Job Description: * ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಜರ್ಮನಿಯಲ್ಲಿ ತಾಪಮಾನ ಬದಲಾವಣೆ ಕುರಿತಂತೆ ಭಾರತದ ಬದ್ಧತೆಯು ದೇಶದ ಸಾಮರ್ಥ್ಯದ ದ್ಯುತಕವು ಆಗಿದೆ ಎಂದು ಅವರು ಪ್ರತಿಪಾದಿಸಿದರು.* ಜಿ -7 ಶೃಂಗದ ಸದಸ್ಯ ರಾಷ್ಟ್ರಗಳು ಭಾರತದ ತಾಪಮಾನ ಬದಲಾವನೆಯ ಸವಾಲಿನ ಯತ್ನವನ್ನು ಬೆಂಬಲಿಸಲಿವೆ ಮತ್ತು ಶುದ್ಧ ಇಂಧನ ತ ತಂತ್ರಜ್ಞಾನಗಳಿಗೆ ವಿಶ್ವದ ಮಾರುಕಟ್ಟೆಯ ಅವಕಾಶಗಳ ಬಳಕೆಗೆ ಆಹ್ವಾನ ನೀಡಲಿವೆ ಎಂದು ಪ್ರಧಾನಿ ಹೇಳಿದರು.* ಶೇ 40 ರಷ್ಟು ಇಂಧನವನ್ನು ಬಳಸುವ ಗುರಿ ಸಾಧನೆಯಲ್ಲಿ ಭಾರತದ ಪಾತ್ರ ಪ್ರಮುಖವಾಗಿದ್ದು ಎಂದು ಹೇಳಿದ್ದಾರೆ.* ಭಾರತವು ನಿಗದಿತ ಗಡುವಿಗೆ 5 ತಿಂಗಳ ಮೊದಲೇ ಪೆಟ್ರೋಲ್ ನಲ್ಲಿ ಶೇ 10 ರಷ್ಟು ಎಥನಾಲ್ ಮಿಶ್ರಣ ಮಾಡುವ ಗುರಿಯನ್ನು ಸಾಧಿಸಿದ್ದಾರೆ ಎಂದು ಪ್ರಧಾನಿ ತಿಳಿಸಿದರು.* ಭಾರತದಲ್ಲಿ ವಿಶ್ವದ ಮೊದಲ ಸಂಪೂರ್ಣ ಸೋಲಾರ್ ವಿದ್ಯುತ್ ಅವಲಂಬಿಸಿದ ವಿಮಾನ ನಿಲ್ದಾಣವನ್ನು ಹೊಂದಿದೆ ಹಾಗು ಭಾರತದಲ್ಲಿ ಬೃಹತ್ ಮಾರು ಕಟ್ಟೆಯು ಶುದ್ಧ ಇಂಧನಕ್ಕೆ ಸಂಬಂಧಿಸಿದ ತಂತ್ರ ಜ್ಞಾನ ಗಳಿಗೆ ಇಲ್ಲಿ ರೂಪುಗೊಳ್ಳುತ್ತಿದೆ ಎಂದರು.* ಜಿ -7 ರಾಷ್ಟ್ರಗಳು 47 ,052 ಲಕ್ಷ ಕೋಟಿ ಬಂಡವಾಳವನ್ನು 2027 ವೇಳೆಗೆ ಹೂಡಿಕೆ ಮಾಡುವ ಯೋಜನೆಯನ್ನು ಮಾಡಿ ಕೊಂಡಿದೆ ಎಂದು ತಿಳಿಸಿದರು.