Job Description: * ಇತ್ತೀಚಿಗೆ ನಡೆದ ಪ್ಯಾರಾ ಶೂಟಿಂಗ್ ವಿಶ್ವಕಪ್ ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ ಮತ್ತು ಶ್ರೀಹರ್ಷ ದೇವರೆಡ್ಡಿ ಅವರು ಚಿನ್ನದ ಪದಕವನ್ನು ಜಯಿಸಿದರು.* ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಚಾಂಪಿಯನ್ ಅವನಿ ಲೇಖರಾ ಅವರು ಇದೀಗ ಫ್ರಾನ್ಸ್ ನ ಚಟಿರಾಕ್ಸ್ ನಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್ ವಿಶ್ವಕಪ್ ನ ವನಿತೆಯ 10 ಮೀ. ಏರ್ ರೈಫಲ್ ಸ್ಟಾಂಡಿಂಗ್ ಎಸ್ಎಚ್ 1 ರಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.* ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ 250.6 ರ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆಲ್ಲುವ ಮೂಲಕ 20 ವರ್ಷದ ಲಖೇರಾ ಅವರು 2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಗಳಿಸಿಕೊಂಡರು. * ಪ್ಯಾರಾ ಶೂಟಿಂಗ್ ವಿಶ್ವಕಪ್ ಮಿಶ್ರ 10 ಮೀ. ಏರ್ ರೈಫಲ್ ಸ್ಟಾಡಿಂಗ್ ಎಸ್ಎಚ್ 2 ನಲ್ಲಿ 253.1 ಅಂಕದೊಂದಿಗೆ ಶ್ರೀಹರ್ಷ ದೇವರಡ್ಡಿ ಅವರು ಚಿನ್ನದ ಪದಕ ಗೆದ್ದಿದ್ದಾರೆ.* ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದಕ್ಕಾಗಿ ಭಾರತದ ಶೂಟರ್ ಅವನಿ ಲೇಖರ ಮತ್ತು ಶ್ರೀಹರ್ಷ ದೇವರದ್ದಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ತಿಳಿಸಿದರು.