Job Description: * ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹೊಸ ಸರಣಿಯ ನಾಣ್ಯಗಳ ಬಿಡುಗಡೆ * ದೃಷ್ಟಿಹೀನರೂ ಗುರುತಿಸಬಹುದಾದ ನಾಣ್ಯ ಬಳಕೆಗೆ ಲಭ್ಯವಾಗಿವೆ * ಎಕ್ಸಿಸ್‌, ಎಚ್‌ಡಿಎಫ್‌ಸಿ ಆಯ್ದ ಶಾಖೆಗಳಲ್ಲಿ ನಾಣ್ಯ ವಿತರಣೆ* ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ವಿಶೇಷವಾಗಿ ರೂಪಿಸಲಾಗಿರುವ 1, 2, 5, 10 ಮತ್ತು 20 ರೂ. ಮುಖಬೆಲೆಯ ನಾಣ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇಲ್ಲಿ ಬಿಡುಗಡೆ ಮಾಡಿದರು.* ಇವು ಸ್ಮರಣಾರ್ಥ ನಾಣ್ಯಗಳಲ್ಲ. ಚಲಾವಣೆಗೆಂದೇ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.* ಈ ನಾಣ್ಯಗಳ ಪೈಕಿ 20 ರೂ. ನಾಣ್ಯ ಹಳೆಯ ವಿನ್ಯಾಸದಲ್ಲಿ 2019 ರಲ್ಲೇ ಚಲಾವಣೆಗೆಂದು ಲೋಕಾರ್ಪಣೆಗೊಂಡಿತ್ತು. ಆದರೆ ಅದು ಹೆಚ್ಚು ಚಲಾವಣೆಗೆ ಬಂದಿರಲಿಲ್ಲ* ‘ನಮ್ಮ ಬ್ಯಾಂಕ್‌ಗಳು ಮತ್ತು ಕರೆನ್ಸಿಯನ್ನು ಜಾಗತಿಕ ವಹಿವಾಟು ಮತ್ತು ಪೂರೈಕೆ ಜಾಲದ ಪ್ರಮುಖ ಭಾಗವನ್ನಾಗಿ ಮಾಡುವುದು ಹೇಗೆ ಎಂಬುದರ ಬಗ್ಗೆಯೂ ನಾವು ಒತ್ತು ನೀಡಬೇಕಿದೆ