Job Description: * ಮೇ ತಿಂಗಳಿನಲ್ಲಿ ಗೋಧಿ ರಫ್ತು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರ, ಈಗ 4,69,202 ಟನ್‌ ಗೋಧಿ ರಫ್ತು ಮಾಡಲು ಅನುಮತಿ ನೀಡಿದೆ* ಬಾಂಗ್ಲಾದೇಶ, ಫಿಲಿಫೈನ್ಸ್, ತಾಂಜಾನಿಯಾ ಮತ್ತು ಮಲೇಷ್ಯಾಕ್ಕೆ ದೇಶಗಳಿಗೆ ಗೋಧಿ ರಫ್ತು ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿದೆ* ಗೋಧಿ ಉತ್ಪಾದಕನೆಯಲ್ಲಿ ಭಾರತ ವಿಶ್ವದ ಎರಡನೇ ಅತಿದೊಡ್ಡ ಗೋಧಿ ಉತ್ಪಾದಿಸುವ ದೇಶವಾಗಿದೆ * ಆಹಾರ ಭದ್ರತೆಗಾಗಿ ಅಗತ್ಯಗಳನ್ನು ಪೂರೈಸಲು ಸರಬರಾಜು ಮಾಡಲು ವಿನಂತಿ ಮಾಡಿರುವ ದೇಶಗಳಿಗೆ ಗೋಧಿ ರಫ್ತು ಮಾಡಲು ಅನುಮತಿ ನೀಡಲಾಗಿದೆ.* "ಕಾಂಡ್ಲಾ ಮತ್ತು ಮುಂದ್ರಾ ಬಂದರುಗಳಲ್ಲಿ ಗರಿಷ್ಠ ಗೋಧಿ ದಾಸ್ತಾನು ಇದೆ, ಅಂದಾಜು 1.3 ಮಿಲಿಯನ್ ಟನ್ ಇಲ್ಲಿ ದಾಸ್ತಾನು ಇದೆ" ಎಂದು ಮುಂಬೈ ಮೂಲದ ಜಾಗತಿಕ ವ್ಯಾಪಾರ ಸಂಸ್ಥೆಯ ಡೀಲರ್ ನಿಂದ ತಿಳಿದು ಬಂದಿದೆ * "ಮುಂಗಾರು ಮಳೆ ಆರಂಭವಾಗಿದ್ದು, ಗೋಧಿ ದಾಸ್ತಾನು ಹಾಳಾಗುವ ಸಾಧ್ಯತೆ ಇದೆ. ಇಅದ್ರಿಂದಾಗಿ ಗೋದಿ ರಫ್ತಿಗೆ ಸರಕಾರ ಅನುಮತಿ ನೀಡಿದೆ.* ಆಹಾರದ ಕೊರತೆ ಎದುರಿಸುತ್ತಿರುವ ಹಲವಾರು ದೇಶಗಳು 1.5 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಗೋಧಿಯನ್ನು ಪೂರೈಸುವಂತೆ ಭಾರತಕ್ಕೆ ಮನವಿ ಮಾಡಿವೆ.