Job Description: * ಟರ್ಕಿ ದೇಶವು ತನ್ನ ಹೆಸರನ್ನು 'ಟರ್ಕಿಯೆ' ಬದಲಾಯಿಸಿಕೊಂಡಿದೆ. ಇದಕ್ಕೆ ವಿದೇಶಾಂಗ ಸಚಿವ ಮೆವ್ಲುಟ್ ಕಾವುಸೊಗ್ಲು ದಾಖಲೆಗೆ ಸಹಿ ಹಾಕಿದರು.* ಮರು-ಬ್ರಾಂಡಿಂಗ್‌ನ ಭಾಗವಾಗಿ, "ಮೇಡ್ ಇನ್ ಟರ್ಕಿಯೆ" ಎಲ್ಲಾ ರಫ್ತು ಮಾಡಿದ ಉತ್ಪನ್ನಗಳ ಮೇಲೆ ಕಾಣಿಸಿಕೊಳ್ಳುತ್ತದೆ ಮತ್ತು ಜನವರಿಯಲ್ಲಿ "ಹಲೋ ಟರ್ಕಿಯೆ" ಎಂಬ ಕ್ಯಾಚ್-ಫ್ರೇಸ್‌ನೊಂದಿಗೆ ಪ್ರವಾಸೋದ್ಯಮ ಅಭಿಯಾನವನ್ನು ಪ್ರಾರಂಭಿಸಲಾಯಿತು.* ದೇಶದ ಛಾಪನ್ನು ಮರು ಸ್ಥಾಪಿಸುವ ಉದ್ದೇಶದಿಂದ ಇಂಥ ನಿರ್ಧಾರ ಕೈಗೊಳ್ಳಲಾಗಿದೆ.* ಅಲ್ಲದೆ, ಟರ್ಕಿ ಎಂಬುದು ಒಂದು ವಿಧದ ಕೋಳಿಯ ಹೆಸರು, ಈ ಪಕ್ಷಿಯ ಹೆಸರಿನೊಂದಿಗೆ ಕೆಲ ನಕಾರಾತ್ಮಕ ಅರ್ಥಗಳು ತಳಕುಹಾಕಿಕೊಂಡಿವೆ.* ಈ ನಕಾರಾತ್ಮಕ ಅಂಶಗಳಿಂದ ದೇಶದ ಹೆಸರನ್ನು ಬೇರ್ಪಡಿಸಬೇಕು ಎಂಬ ಉದ್ದೇಶವೂ ಇದೆ ಎಂದು ಹೇಳಲಾಗಿದೆ.* ಜಾಗತಿಕ ವೇದಿಕೆಗಳಲ್ಲಿ ದೇಶದ ಹೆಸರನ್ನು ಟರ್ಕಿಯೇ ಎಂದೇ ಬಳಸಬೇಕು ಎಂಬ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ ಎಂದು ಅಧ್ಯಕ್ಷ ರಿಸಿಪ್ ತಯ್ಯಪ ಎರ್ಡೋ ಗನ್ ಅವರ ಕಚೇರಿ ಹೇಳಿದೆ.