Job Description: * ಮೋದಿಯವರ ನೇತೃತ್ವದಲ್ಲಿ ದೇಶವು 50% ಗ್ರಾಮೀಣ ಕುಟುಂಬಗಳು ನಲ್ಲಿ ನೀರಿನ ಸಂಪರ್ಕ ಪಡೆಯುವ ಹೊಸ ಮೈಲಿಗಲ್ಲು ಸಾಧಿಸಿದೆ* ಜಲ ಜೀವನ್ ಮಿಷನ್ ಯೋಜನೆಯ ಯಶಸ್ಸಿಗೆ ಸಮುದಾಯ ವಂತಿಗೆ ಹಾಗೂ ಸಮುದಾಯ ಸಹಭಾಗಿತ್ವ ಎಂಬ ಶಕ್ತಿಮದ್ದು* ಗೋವಾ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬರ್ ದ್ವೀಪಗಳು, ದಾದ್ರ ಮತ್ತು ನಗರ್ ಹವೇಲಿ, ದಾಮನ್ ಮತ್ತು ದಿಯು, ಪುದುಚೇರಿ ಮತ್ತು ಹರಿಯಾಣ ಈಗಾಗಲೇ 100% ಗೃಹ ನಲ್ಲಿ ನೀರು ಸಂಪರ್ಕ ಸಾಧಿಸಿವೆ.* ಪಂಜಾಬ್, ಗುಜರಾತ್, ಹಿಮಾಚಲ ಪ್ರದೇಶ ಮತ್ತು ಬಿಹಾರ 90%ಗಿಂತ ಹೆಚ್ಚಿನ ಕಾರ್ಯ ಪೂರ್ಣಗೊಂಡಿದ್ದು, 'ಹರ್ ಘರ್ ಜಲ್' ಸ್ಥಾನಮಾನ ಪಡೆಯುವತ್ತ ವೇಗವಾಗಿ ಪ್ರಗತಿ ಸಾಧಿಸುತ್ತಿವೆ.* ಮಹಾತ್ಮ ಗಾಂಧೀಜಿ ಅವರ “ಗ್ರಾಮ ಸ್ವರಾಜ್ಯ” ಕನಸಾದ ಸಾಧಿಸುವ ನಿಟ್ಟಿನಲ್ಲಿ, ಜಲ ಜೀವನ್ ಮಿಷನ್ ಕಾರ್ಯ ನಿವಹಿಸುತ್ತಿದೆ. * 2024 ರ ವೇಳೆಗೆ ಪ್ರತಿ ಗ್ರಾಮೀಣ ಮನೆಯಲ್ಲಿ ನಲ್ಲಿ ನೀರಿನ ಸಂಪರ್ಕ ಖಚಿತಪಡಿಸಿಸಲು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸಹಭಾಗಿತ್ವದಲ್ಲಿ ಜಲಶಕ್ತಿ ಸಚಿವಾಲಯದ ಅಡಿ ಜಲ ಜೀವನ್ ಮಿಷನ್ ಜಾರಿಗೊಳಿಸಲಾಗಿದೆ.* 2019 ರಲ್ಲಿ ಈ ಜಲ ಜೀವನ್ ಮಿಷನ್ ಆರಂಭಿಸಲಾಯಿತು.* ಈ ವರ್ಷ ರಾಷ್ಟ್ರವು ‘ಆಜಾದಿ ಕಾ ಅಮೃತ ಮಹೋತ್ಸವ’ ಆಚರಿಸುತ್ತಿರುವ ಸುಸಂದರ್ಭದಲ್ಲಿ, ‘ವಾಶ್ ಪ್ರಬುದ್ಧ್ ಗಾಂವ್’ ಗುರಿ ಸಾಧಿಸುವ ನಿಟ್ಟಿನಲ್ಲಿ ಮೋದಿಯವರು ಮಾತನಾಡಿದರು