Job Description: * ಜಾಗತಿಕ ಮಟ್ಟದಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷದ ಮೇ 31 ರಂದು "ವಿಶ್ವ ತಂಬಾಕು ರಹಿತ ದಿನ" ವನ್ನಾಗಿ ಆಚರಿಸಲಾಗುತ್ತದೆ.* ಪ್ರಪಂಚದಾದ್ಯಂತ ಪ್ರತಿ ವರ್ಷ ತಂಬಾಕು ಸೇವನೆಯಿಂದ 80 ಲಕ್ಷಕ್ಕೂ ಹೆಚ್ಚು ಜನರು ಸಾವಿನ ತುತ್ತಾಗುತ್ತಿದ್ದಾರೆ.* 2030 ರ ಹೊತ್ತಿಗೆ ತಂಬಾಕು-ಸಂಬಂಧಿತ ರೋಗಗಳಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ಮೂರನೇ ಒಂದು ಭಾಗದಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ.ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು 1987 ರಲ್ಲಿ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲು ಒಪ್ಪಿಕೊಂಡವು. ಅಂದಿನಿಂದ ಈ ದಿನವನ್ನು ಪ್ರತಿ ವರ್ಷವೂ ಒಂದು ಸಂಬಂಧಿತ ವಿಷಯದೊಂದಿಗೆ ಗುರುತಿಸಲಾಗುತ್ತದೆ* ವಿಶ್ವ ತಂಬಾಕು ರಹಿತ ದಿನವನ್ನು ಪ್ರತಿ ವರ್ಷವೂ ಒಂದು ಸಂಬಂಧಿತ ವಿಷಯದೊಂದಿಗೆ ಗುರುತಿಸಲಾಗುತ್ತದೆ. ಈ ವರ್ಷದ "ಪರಿಸರವನ್ನು ರಕ್ಷಿಸಿ" ಎನ್ನುವ ಗುರಿ ಇಟ್ಟುಕೊಳ್ಳಲಾಗಿದೆ.