Job Description: * ದೇಶದ ಆರ್ಥಿಕ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಐಎಸ್‌ಬಿ ವಿದ್ಯಾರ್ಥಿಗಳ ಪಾತ್ರವು ಬಹು ಮುಖ್ಯವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.* ಇಂಡಿಯನ್‌ ಸ್ಕೂಲ್‌ ಆಫ್‌ ಬಿಸಿನೆಸ್‌ (ಐಎಸ್‌ಬಿ) ಸಂಭ್ರಮಾಚರಣೆಯಲ್ಲಿ ಪ್ರಧಾನಿಯವರು ಭಾಗವಹಿಸಿದ್ದರು ಮತ್ತು 2022 ರ ಪಿಜಿಪಿ ತರಗತಿಯ ಪದವಿ ಸಮಾರಂಭವನ್ನು ಆಚರಿಸಿದರು.* 2001ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ಐಎಸ್‌ಬಿ ಸಂಸ್ಥೆಯನ್ನು ದೇಶಕ್ಕೆ ಸಮರ್ಪಿಸಿದ್ದರು* ಇಂದು ಭಾರತವು ಜಿ20 ರಾಷ್ಟ್ರಗಳ ಗುಂಪಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ* ಸ್ಮಾರ್ಟ್‌ಫೋನ್ ಡೇಟಾ ಗ್ರಾಹಕರ ವಿಷಯದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಇಂಟರ್ ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ.