Job Description: * ಟೋಕಿಯೋದಲ್ಲಿ ಯುನಿಕ್ಲೋ ನ ಮೂಲ ಕಂಪನಿಯಾದ ಫಾಸ್ಟ್ ರಿಟೇಲಿಂಗ್ ಕಂಪನಿ ಲಿಮಿಟೆಡ್‌ನ ಪ್ರಧಾನ ಅಧಿಕಾರಿ, ಅಧ್ಯಕ್ಷ ಮತ್ತು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ತದಾಶಿ ಯನಾಯ್ ಅವರನ್ನು ಭೇಟಿಯಾದರು.* ಭಾರತದ ಜವಳಿ ಮತ್ತು ಉಡುಪು ಮಾರುಕಟ್ಟೆ ಮತ್ತು ಭಾರತದಲ್ಲಿ ಜವಳಿ ಯೋಜನೆಗಳಿಗೆ ಉತ್ಪಾದಕತೆ ಸಂಬಂಧಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ಇರುವ ಹೂಡಿಕೆ ಅವಕಾಶಗಳ ಕುರಿತು ಸಭೆಯಲ್ಲಿ, ಮೋದಿ ಅವರು ಚರ್ಚಿಸಿದರು. * ಭಾರತದ ಜವಳಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪಿಎಂ-ಮಿತ್ರ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಯುನಿಕ್ಲೋಗೆ ಪ್ರಧಾನಮಂತ್ರಿಯವರು ಆಹ್ವಾನ ನೀಡಿದರು.* ಜವಳಿ ಉತ್ಪಾದನೆಯಲ್ಲಿ ತಂತ್ರಜ್ಞಾನಗಳ ಬಳಕೆಗೆ ಭಾರತದ ಪ್ರಯತ್ನಗಳಲ್ಲಿ ಯುನಿಕ್ಲೋ ನ ಹೆಚ್ಚಿನ ಭಾಗವಹಿಸುವಿಕೆಯನ್ನು ಪ್ರಧಾನಮಂತ್ರಿಯವರು ಫಾಸ್ಟ್ ರೀಟೇಲಿಂಗ್ ಕಂಪನಿಗೆ ಕರೆ ಕೊಟ್ಟರು.