Job Description: * ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಮೇ 23 ರಂದು ಟೋಕಿಯೊದಲ್ಲಿ ಜಪಾನಿನ ವಾಣಿಜ್ಯ ನಾಯಕರೊಂದಿಗೆ ದುಂಡುಮೇಜಿನ ಸಭೆಯ ಅಧ್ಯಕ್ಷ ತೆ ವಹಿಸಿದ್ದರು.* ಜಪಾನಿನ 34 ಕಂಪನಿಗಳ ಉನ್ನತ ಕಾರ್ಯನಿರ್ವಾಹಕರು ಮತ್ತು ಸಿಐಒಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.* ಈ ಕಂಪನಿಗಳಲ್ಲಿಹೆಚ್ಚಿನವು ಭಾರತದಲ್ಲಿಹೂಡಿಕೆ ಮತ್ತು ಕಾರ್ಯಾಚರಣೆಗಳನ್ನು ಹೊಂದಿದೆ. ಆಟೋಮೊಬೈಲ್, ಡಿಸೀಸ್, ಸೆಮಿಕಂಡಕ್ಟರ್, ಉಕ್ಕು, ತಂತ್ರಜ್ಞಾನ, ವ್ಯಾಪಾರ ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು ಸೇರಿದಂತೆ ವಿವಿಧ ವಲಯಗಳ ಕಂಪನಿಗಳು ಪ್ರತಿನಿಧಿಸುತ್ತವೆ. * 2022ರ ಮಾರ್ಚ್‌ನಲ್ಲಿ ಪ್ರಧಾನಮಂತ್ರಿ ಕಿಶಿಡಾ ಅವರು ಭಾರತಕ್ಕೆ ಭೇಟಿ ನೀಡಿದಾಗ, ಮುಂದಿನ 5 ವರ್ಷಗಳಲ್ಲಿ ಜಪಾನಿನ ಯೆನ್ 5 ಟ್ರಿಲಿಯನ್ ಹೂಡಿಕೆಯ ಮಹತ್ವಾಕಾಂಕ್ಷೆಯ ಗುರಿಯನ್ನು ಎರಡು ದೇಶಗಳಿಗೆ ನಿಗದಿಪಡಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. * ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಜಪಾನ್‌ನ ಕೊಡುಗೆಯನ್ನು ‘ಜಪಾನ್‌ ಸಪ್ತಾಹ’ದ ರೂಪದಲ್ಲಿ ಆಚರಿಸಲು ಪ್ರಸ್ತಾಪಿಸಿದರು. * * ಭಾರತ ಅಮೇರಿಕ ಒಪ್ಪಂದ:* ಭಾರತ ಅಮೇರಿಕ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದವು * ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮತ್ತು ಅಮೇರಿಕಾದ ಹಣಕಾಸು ಸಂಸ್ಥೆಯ ಸಿಇಓ ಸ್ಕಾಟ್ ನಾಥನ ಅವರು ಈನ್ ಒಪ್ಪಂದಕ್ಕೆ ಸಹಿ ಹಾಕಿದರು. * ಕ್ವಾಡ ಶೃಂಗ ಸಭೆಯಲ್ಲಿ ಮೋದಿ ಬೈದನ್ ಸಭೆಗೂ ಮುನ್ನ ಈ ಒಪ್ಪಂದಕೆ ಸಹಿ ಹಾಕಿದರು.