Job Description: * ಆಸ್ಟ್ರೇಲಿಯಾ ನೂತನ ಪ್ರಧಾನಿಯಾಗಿ ಆ್ಯಂಟನಿ ಅಲ್ಬನೀಸ್ ಅವರು ಇತ್ತೀಚಿಗೆ ಗವರ್ನರ್ ಜನರಲ್ ಡೇವಿಡ್ ಹಾರ್ಲೆ ಅವರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು.* ತದನಂತರ ಅಲ್ಬನೀಸ್ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ನ ಟೋಕಿಯೊಗೆ ತೆರಳಿದರು.* ಆ್ಯಂಟನಿ ಅಲ್ಬನೆಸ್‌ ನೇತೃತ್ವದ ಪಕ್ಷ 2007 ರ ನಂತರ ಇದೇ ಮೊದಲಿಗೆ ಅಧಿಕಾರ ಗಳಿಸಿ ಮುನ್ನಡೆದಿದೆ.* ಅಲ್ಪಮತದ ಸರ್ಕಾರ ರಚನೆಯ ಸೂಚನೆ ಸ್ಪಷ್ಟವಾಗಿದೆ. ಹಿಂದೆ 2010-13 ರಲ್ಲಿ ಅತಂತ್ರ ಸಂಸತ್ತು ರಚನೆಯಾಗಿತ್ತು. ‘ತಮ್ಮ ನೇತೃತ್ವ ತಂಡವು ಸೋಮವಾರ ಪ್ರಮಾಣವಚನ ಸ್ವೀಕರಿಸಲಿದೆ’ ಎಂದೂ ಆ್ಯಂಟನಿ ತಿಳಿಸಿದ್ದಾರೆ.* ಚುನಾವಣಾ ವಿಜಯದ ನಂತದ ಕಾರ್ಯಕರ್ತರು ಮತ್ತು ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ಇತರ ದೇಶಗಳ ಜೊತೆಗಿನ ಸ್ನೇಹವನ್ನು ಇನ್ನಷ್ಟು ಬಲಪಡಿಸುತ್ತೇನೆ, ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಹಾಗೂ ಕಾರ್ಮಿಕರನ್ನು ಬಲಪಡಿಸುವ ಕೆಲಸವನ್ನು ಮಾಡುತ್ತೇವೆ. ಆರ್ಥಿಕವಾಗಿ ಬಲಪಡಿಸುವ ಯೋಜನೆಯನ್ನು ನಮ್ಮ ಸರಕಾರ ಹಾಕಿ ಕೊಳ್ಳಲಿದೆ. ಒಟ್ಟಿನಲ್ಲಿ ದೇಶದ ಜನರಿಗೆ ಉತ್ತಮ ಆಡಳಿತವನ್ನು ನೀಡುತ್ತೇವೆ ಎಂದು ತಿಳಿಸಿದರು. ದೇಶದ 31 ನೇ ನಾಯಕನನ್ನಾಗಿ ಆಯ್ಕೆ ಆಗಿದ್ದರೆ.