Job Description: * ಲೇಬರ್ ಪಕ್ಷದ ನಾಯಕ ಆಂಥೋನಿ ಅಲ್ಬನೀಸ್(Anthony Albanese) ಅವರು ಆಸ್ಟ್ರೇಲಿಯಾದ 31 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.* ಇದೇ ವೇಳೆ ಲೇಬರ್ ಸೆನೆಟರ್ ಪೆನ್ನಿ ವಾಂಗ್ ವಿದೇಶಾಂಗ ಸಚಿವರಾಗಿ, ರಿಚರ್ಡ್ ಮಾರ್ಲ್ಸ್ ಉಪ ಪ್ರಧಾನ ಮಂತ್ರಿಯಾಗಿ, ಜಿಮ್ ಚಾಲ್ಮರ್ಸ್ ಖಜಾಂಚಿಯಾಗಿ ಮತ್ತು ಕೇಟಿ ಗಲ್ಲಾಘರ್ ಹಣಕಾಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. * ಅಲ್ಬನೀಸ್ ಗವನರ್-ಜನರಲ್ ಡೇವಿಡ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.* ಆಂಥೋನಿ ಅಲ್ಬನೀಸ್ ಟೋಕಿಯೊದಲ್ಲಿ ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ಭಾಗವಹಿಸುವ ಮೊದಲು ದೇಶದ ಹೊಸ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.* ಅಲ್ಬನೀಸ್ ಅವರು ಅಮೆರಿಕ ಅಧ್ಯಕ್ಷ ಬಿಡೆನ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭದ್ರತಾ ಶೃಂಗಸಭೆಗಾಗಿ ಟೋಕಿಯೊಗೆ ಹೋದರು.* ಬಿಡೆನ್ ಅವರು ಕರೆ ಮಾಡಿ ಅಭಿನಂಡಿಸಿದರು ಮತ್ತು ಎರಡೂ ರಾಷ್ಟ್ರಗಳ ಮೈತ್ರಿಯನ್ನು ಬಲಪಡಿಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.* ಆಸ್ಟ್ರೇಲಿಯಾದ ಲೇಬರ್ ಪಕ್ಷದ ವಿಜಯಕ್ಕಾಗಿ ಮತ್ತು ಪ್ರಧಾನಮಂತ್ರಿಯಾಗಿ ಅವರು ಆಯ್ಕೆಯಾದದ್ದಕ್ಕಾಗಿ ಆಂಥೋನಿ ಅಲ್ಬನೀಸ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.