Job Description: * ವಿಶ್ವಸಂಸ್ಥೆಯ ಪ್ರಧಾನ ಅಂಗಸಂಸ್ಥೆಗಳಲ್ಲಿ ಭದ್ರತಾ ಮಂಡಳಿ ಬಹಳ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ಅಂಗಸಂಸ್ಥೆಯಾಗಿದೆ.* ಭದ್ರತಾ ಮಂಡಳಿಯ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ 15 (ಖಾಯಂ 5 ರಾಷ್ಟ್ರಗಳು + ಖಾಯಂ ಅಲ್ಲದ 10 ರಾಷ್ಟ್ರಗಳು ) ಅಮೆರಿಕಾ , ರಷ್ಯಾ , ಬ್ರಿಟನ್ , ಫ್ರಾನ್ಸ್ , ಚೀನಾ ದೇಶಗಳು ಖಾಯಂ ಸದಸ್ಯರಾಷ್ಟ್ರಗಗಳಾಗಿವೆ.* ವಿಶ್ವಸಂಸ್ಥೆಯ ಸುಧಾರಣೆಯ ಬಗ್ಗೆ ಸುದೀರ್ಘವಾದ ಚರ್ಚೆಗಳು, ವಿಶೇಷವಾಗಿ ಪ್ರಸ್ತುತ ಜಗತ್ತನ್ನು ಪ್ರತಿನಿಧಿಸದ ಭದ್ರತಾ ಮಂಡಳಿಯ ಪಾತ್ರ ಹಾಗೂ ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ತಡೆಯಲು ಅದು ವಿಫಲವಾಗಿರುವುದು ಈ ಜಾಗತಿಕ ಚರ್ಚೆಗೆ ಪ್ರಮುಖ ಕಾರಣವಾಗಿದೆ.* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬಳಕೆಯಲ್ಲಿರುವ ವೀಯೊ ಪವರ್ ಜಾಗತಿಕವಾಗಿ ವೀಟೊ ಹಕ್ಕುಗಳ ರಾಜಕೀಯಕ್ಕೆ ಸಂಬಂಧಪಟ್ಟಂತೆ ಜಿ4 ದೇಶಗಳು ಮತ್ತು ಕಾಪಿ ಕ್ಲಬ್ ಎಂಬ ಎರಡು ಬಣಗಳಿವೆ.* * ಜಿ 4 ದೇಶಗಳು :* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ( UNSC - Inited Nations security council ) ಕಾಯಂ ಸದಸ್ಯರಾಗಲು ಹಾತೊರೆಯುತ್ತಿರುವ ಜರ್ಮನಿ , ಭಾರತ , ಜಪಾನ್ ಮತ್ತು ಬ್ರೆಜಿಲ್‌ನ ದೇಶಗಳ ಒಂದು ಗುಂಪನ್ನು ಜಿ 4 ದೇಶಗಳು ಎಂದು ಕರೆಯುತ್ತಾರೆ.* ಜಿ 4ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವಕ್ಕಾಗಿ ಪರಸ್ಪರ ಬಿಡ್ ಗಳನ್ನು ಬೆಂಬಲಿಸುತ್ತವೆ.* ಜಿ 4 ಗುಂಪು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವವನ್ನು ಪಡೆಯುವ ಉದ್ದೇಶದಿಂದ, ಭದ್ರತಾ ಮಂಡಳಿಗೆ ಆರು ಕಾಯಂ ಸದಸ್ಯರು ಮತ್ತು ನಾಲ್ಕು ಕಾಯಂ ಅಲ್ಲದ ಸದಸ್ಯರನ್ನು ಸೇರಿಸುವ ಮೂಲಕ 15 ರಿಂದ 25 ರವರೆಗೆ ಭದ್ರತಾ ಮಂಡಳಿಯ ಸದಸ್ಯತ್ವವನ್ನು ವಿಸ್ತರಿಸಬೇಕು ಎಂದು ಹೇಳುತ್ತದೆ.* ಒಮ್ಮತದ ಗುಂಪು / ಕಾಫಿ ಕ್ಲಬ್ -Uniting for consensus ಗ್ರೂಪ್ ಅನ್ನು ಕಾಫಿ ಕ್ಲಬ್ ಎಂದೂ ಕರೆಯಲಾಗುತ್ತದೆ . ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿರುವ ಶಾಶ್ವತವಲ್ಲದ ಸದಸ್ಯತ್ವವನ್ನು 10 ರಿಂದ 20 ಸದಸ್ಯರಿಗೆ ವಿಸ್ತರಿಸಲು ಮತ್ತು ಕೌನ್ಸಿಲ್‌ನ ಕಾರ್ಯಚಟುವಟಿಕೆಗಳಲ್ಲಿ ವಿವಿಧ ಬದಲಾವಣೆಗಳನ್ನು ಇದು ಪ್ರಸ್ತಾಪಿಸುತ್ತದೆ.* ಜಿ 4 ದೇಶಗಳೆಂದು ಕರೆಯಲ್ಪಡುವ ಬ್ರೆಜಿಲ್ , ಜರ್ಮನಿ ಭಾರತ ಮತ್ತು ಜಪಾನ್ ದೇಶಗಳಿಂದ ಶಾಶ್ವತ ಸ್ಥಾನಮಾನಕ್ಕಾಗಿ ಹಾಕುತ್ತಿರುವ ಬಿಟ್‌ಗಳನ್ನು ಸೋಲಿಸುವುದು ಇದರ ಕಾರ್ಯವಾಗಿದೆ.ಈ ಕಾಫಿ ಕ್ಲಬ್‌ನ ಪ್ರಮುಖ ದೇಶಗಳೆಂದರೆ ಇಟಲಿ , ಪಾಕಿಸ್ತಾನ , ದಕ್ಷಿಣ ಕೊರಿಯಾ , ಮೆಕ್ಸಿಕೊ ಮತ್ತು ಅರ್ಜೆಂಟೀನಾ