Job Description: * ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸಹಾಯಕ ಸಚಿವರಾದ ಶ್ರೀ ಭಗವಂತ್ ಖೂಬಾ ಅವರಿಂದ "ಉತ್ಕೃಷ್ಟತಾ ಕೇಂದ್ರದೊಂದಿಗೆ ಉದ್ಯಮ ಸಂಪರ್ಕ ಸಮಾವೇಶ” ಉದ್ಘಾಟನೆ ಮಾಡಲಾಯಿತು.* ʻಇಂಡಿಯಾ ಹ್ಯಾಬಿಟೇಟ್ ಸೆಂಟರ್ʼನಲ್ಲಿರುವ ʻಹ್ಯಾಬಿಟೇಟ್ ವರ್ಲ್ಡ್ʼನಲ್ಲಿ “ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ (ಡಿಸಿಪಿಸಿ) ಅಡಿಯಲ್ಲಿ ಉತ್ಕೃಷ್ಟತಾ ಕೇಂದ್ರದೊಂದಿಗೆ ಉದ್ಯಮ ಸಂಪರ್ಕ ಸಮಾವೇಶ”ವನ್ನು ಖೂಬಾ ಅವರು ಉದ್ಘಾಟಿಸಿದರು. * ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ (ಡಿಸಿಪಿಸಿ) ಇಲಾಖೆ ಅಡಿಯಲ್ಲಿ ಬರುವ ʻಸೆಂಟ್ರಲ್ ಇನ್ಸ್‌ಟಿಟ್ಯೂಟ್‌ ಆಫ್ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿʼ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.* ಜ್ಞಾನ ಸೃಷ್ಟಿ ಮತ್ತು ಅದರ ವಾಣಿಜ್ಯೀಕರಣ ನಿಯಮಿತ ಸಂವಹನಗಳ ಮೂಲಕ ಅವುಗಳ ನಡುವೆ ಸೇತುಬಂಧ ಏರ್ಪಡಿಸುವುದು ಭಗವಂತ ಖೂಬಾ ಅವರ ಉದ್ದೇಶವಾಗಿದೆ.