Job Description: * ಕರ್ನಾಟಕದ ಕ್ಯಾಸಲ್ ರಾಕ್ ರೈಲು ನಿಲ್ದಾಣದಿಂದ ಗೋವಾದ ಕೊಲ್ಲೆಂ ರೈಲು ನಿಲ್ದಾಣದವರೆಗಿನ ನೈಋತ್ಯ ರೈಲ್ವೆಯ ಮಾರ್ಗವನ್ನು ಜೋಡಿ ಹಳಿ ಮಾರ್ಗವಾಗಿ ಪರಿವರ್ತಿಸುವ ವಿವಾದಾತ್ಮಕ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ನೀಡಿದ್ದ ಹಸಿರು ನಿಶಾನೆಯನ್ನು ಇತ್ತೀಚಿಗೆ ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.* ರೈಲ್ವೆಜೋಡಿ ಹಳಿ ಯೋಜನೆಯ ಹೊರತಾಗಿ, ಗೋವಾ-ಕರ್ನಾಟಕ ಅರಣ್ಯದ ಗಡಿಯಲ್ಲಿ ಬರುವ ವಿದ್ಯುತ್ ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿ 4A ವಿಸ್ತರಣೆಯ ಎರಡು ಯೋಜನೆಗಳು ಪರಿಸರದ ಮೇಲೆ ಉಂಟುಮಾಡುವ ಪರಿಣಾಮವನ್ನು ಅಂದಾಜಿಸುವ ಹೊಣೆಯನ್ನು ಸಿಇಸಿಗೆ ವಹಿಸಲಾಗಿದೆ.* ಈ ರೈಲು ಮಾರ್ಗ ಹಾದು ಹೋಗಿರುವ ಪಶ್ಚಿಮ ಘಟ್ಟಗಳನ್ನು ಯುನೆಸ್ಕೊ ಅನುಮೋದಿಸಿರುವ ಪರಿಸರ ಸೂಕ್ಷ್ಮ ಪ್ರದೇಶವನ್ನು ಒಳಗೊಂಡಿದೆ. ಅಲ್ಲಿ ಹೆಚ್ಚುವರಿ ರೈಲು ಹಳಿ ಹಾದುಹೋದರೆ, ಅಲ್ಲಿರುವ ವನ್ಯಜೀವಿ ಮತ್ತು ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂದು ತನ್ನ ವರದಿಯಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ. * ಜೋಡಿ ಹಳಿ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ, ವಿದ್ಯುತ್ ಯೋಜನೆಗಾಗಿ ಸುಮಾರು 50 ಸಾವಿರ ಮರಗಳನ್ನು ಕಡಿಯಲಾಗುತ್ತದೆ.* ಈ ಮೂರು ಯೋಜನೆಗಳು ಜಾರಿಯಾದರೆ ಸುಮಾರು 50 ಸಾವಿರ ಮರಗಳ ನಾಶವಾಗಲಿದೆ ಎಂದು ಈ ಯೋಜನೆಗೆ ಹಲವು ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳು ವಾದಿಸಿ , ಯೋಜನೆಗಳ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದವು.* ಗೋವಾದ ಸ್ಥಳೀಯ ಗ್ರೀನ್ NGO ' ಗೋವಾ ಫೌಂಡೇಶನ್ ' ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.