Job Description: ಇದೆ ಮೇ 9 ರಂದು ಭಾರತೀಯ ಹವಾಮಾನ ಇಲಾಖೆ(IMD)ಯು ಮುಂದಿನ 48 ಗಂಟೆಗಳಲ್ಲಿ 'ಅಸಾನಿ' ಚಂಡಮಾರುತವು ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.* ಆಸಾನಿ ಚಂಡಮಾರುತವು ಈ ಋತುವಿನ ಮೊದಲನೆಯ ಚಂಡಮಾರುತವಾಗಿದೆ.* 'ಅಸಾನಿ' ಚಂಡಮಾರುತವು ಮೇ 9 ರಂದು ಮಧ್ಯಾಹ್ನದ ವೇಳೆಗೆ ಪುರಿಯ ದಕ್ಷಿಣ-ಆಗ್ನೇಯ ದಿಕ್ಕಿನಲ್ಲಿ 680 ಕಿಮೀ ಮತ್ತು ವಿಶಾಖಪಟ್ಟಣದಿಂದ 580 ಕಿಮೀ ದೂರದಲ್ಲಿದೆ.* ಇದು ಬಂಗಾಳಕೊಲ್ಲಿಯಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿಯ ಕಡೆಗೆ ಗಂಟೆಗೆ 25 ಕಿಮೀ ವೇಗದಲ್ಲಿ ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಿದೆ. ಚಂಡಮಾರುತದ ಪರಿಣಾಮ : ಕರಾವಳಿ ಒಡಿಶಾದಾದ್ಯಂತ ಹಲವು ಜಿಲ್ಲೆಗಳಲ್ಲಿ ಮೇ 10 ರಂದು (ಮಂಗಳವಾರ) ಸಂಜೆಯಿಂದ ಹಗುರದಿಂದ ಸಾಧಾರಣ ಮಳೆಯಾಗಬಹುದು ಮತ್ತು ಗಜಪತಿ, ಗಂಜಾಂ ಮತ್ತು ಪುರಿ ಮೇಲೆ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆ (7 -11 ಸೆಂ.ಮೀ.) ಆಗಬಹುದು. ಭಾರತವು ಸೂಚಿಸಿರುವ ಮುಂಬರುವ ಚಂಡಮಾರುತಗಳ ಹೆಸರುಗಳು : ಘುರ್ನಿ, ಪ್ರೊಬಾಹೊ, ಝಾರ್ ಮತ್ತು ಮುರಾಸು ಅಸನಿ ಎಂದರೇನು?ಪ್ರತಿಯೊಂದು ಚಂಡಮಾರುತಗಳಿಗೂ ಪಾಳಿ ಪ್ರಕಾರವಾಗಿ ಹೆಸರಿಟ್ಟುಕೊಂಡು ಬರಲಾಗುತ್ತದೆ. ಈ ಬಾರಿಯ ಚಂಡಮಾರುತಕ್ಕೆ 'ಅಸಾನಿ' ಎಂದು ಹೆಸರಿಟ್ಟಿದ್ದು, ಶ್ರೀಲಂಕಾದಿಂದ ಹೆಸರನ್ನು ಆಯ್ಕೆ ಮಾಡಲಾಗಿದೆ. ಸಿಂಹಳಿಯ ಭಾಷೆಯಲ್ಲಿಅಸಾನಿ ಎಂದರೆ ಕ್ರೋಧ ಎಂದರ್ಥ.