Job Description: * ಇತ್ತೀಚಿಗೆ ಧಾನಿ ನರೇಂದ್ರ ಮೋದಿ ಅವರು ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ ಎಂದಿದ್ದಾರೆ. * ಪ್ರಧಾನಿ ಮೋದಿ ಅವರು ಪ್ರಸ್ತುತ ಬೆಂಗಳೂರಿನಲ್ಲಿನ ಸೆಮಿಕಾನ್ ಇಂಡಿಯಾ-2022 ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ವರ್ಚುವಲ್ ಸಭೆಯ ಮೂಲಕ ಭಾಗವಹಿಸಿ ಇದೀಗ ಭಾರತವು ದೃಢವಾದ ಆರ್ಥಿಕತೆಯಡೇಗೆ ಸಾಗುತ್ತಿದೆ ಹಾಗೂ 2030 ರ ವೇಳೆಗೆ ದೇಶದ ಅರೆವಾಹಕಗಳ ಬಳಕೆಯು 110 ಶತಕೋಟಿ ಡಾಲರ್ ದಾಟುವ ನಿರೀಕ್ಷೆಯಿದೆ ಎಂದಿದ್ದಾರೆ. ಹಾಗೂ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ ಎಂದಿದ್ದಾರೆ. * ಪ್ರಸ್ತುತ ಭಾರತವು 5G ಯಲ್ಲಿ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಇದೀಗ ಭಾರತವು ಹೊಸ ಹೊಸ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸಲು ದಾರಿಯಾಗುತ್ತಿದೆ. ಅಷ್ಟೇ ಅಲ್ಲದೇ ಭಾರತವು ಸುಮಾರು '06' ಲಕ್ಷ ಹಳ್ಳಿಗಳನ್ನು ಬ್ರಾಡ್‌ಬ್ಯಾಂಡ್‌ನೊಂದಿಗೆ ಸಂಪರ್ಕಿಸುವಲ್ಲಿ ಸಾಗುತ್ತಿದೆ. ಪ್ರಸ್ತುತ 2026 ರ ವೇಳೆಗೆ ಭಾರತದ ಸ್ವಂತ ಅರೆವಾಹಕಗಳ ಬಳಕೆಯು 80 ಶತಕೋಟಿ ಡಾಲರ್ ಮತ್ತು 2030 ರ ವೇಳೆಗೆ 110 ಶತಕೋಟಿ ಡಾಲರ್ ದಾಟುವ ನಿರೀಕ್ಷೆಯಿದೆ ಎಂದಿದ್ದಾರೆ. * ಪ್ರಸ್ತುತ ಜಾಗತಿಕ ಅರೆವಾಹಕ ಪೂರೈಕೆ ಸರಪಳಿಯಲ್ಲಿ ಭಾರತವನ್ನು ಪ್ರಮುಖ ಪಾಲುದಾರರಲ್ಲಿ ಒಂದಾಗಿ ಸ್ಥಾಪಿಸಲು ಹಾಗೂ ಹೈಟೆಕ್, ಉತ್ತಮ ಗುಣಮಟ್ಟ, ಹೆಚ್ಚಿನ ಮಟ್ಟದ ವಿಶ್ವಾಸಾರ್ಹತೆಯನ್ನು ಬೆಳೆಸಲು ಪ್ರಧಾನಿ ಮೋದಿ ಜನರಿಗೆ ಕರೆ ನೀಡಿದ್ದಾರೆ. * ಇದೀಗ ಭಾರತವು 1.3 ಬಿಲಿಯನ್ ಭಾರತೀಯರನ್ನು ಸಂಪರ್ಕಿಸಲು ಡಿಜಿಟಲ್ ಮೂಲಸೌಕರ್ಯವನ್ನು ಸ್ಥಾಪಿಸುತ್ತಿದೆ ಹಾಗೂ UPI ವಿಶ್ವದ ಅತ್ಯಂತ ಪರಿಣಾಮಕಾರಿ ಪಾವತಿ ಮೂಲಸೌಕರ್ಯವಾಗಿದೆ. ಇದೀಗ ದೇಶವು ಡಿಜಿಟಲ್ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದೆ ಎಂದು ಮೋದಿ ಅವರು ತಿಳಿಸಿದ್ದಾರೆ.