Job Description: * ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಜೊತೆಯಾಗಿ ಅಸ್ಸಾಂನಲ್ಲಿ ವಿವಿಧ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ. ಅದರಲ್ಲೂ ಮುಖ್ಯವಾಗಿ '07' ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆಗಳಿಗೆ ಚಾಲನೆ ನೀಡಿದ್ದಾರೆ. * ಪ್ರಸ್ತುತ ಅಸ್ಸಾಂನಲ್ಲಿನ ದಿಬ್ರುಗಢ್ ಕ್ಯಾನ್ಸರ್ ಆಸ್ಪತ್ರೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ ಎಂದಿದ್ದಾರೆ. ಜೊತೆಗೆ ಕೊಕ್ರಜಾರ್, ಬರ್ಪೇಟಾ, ದರ್ರಾಂಗ್, ತೇಜ್‌ಪುರ, ಲಖಿಂಪುರ ಹಾಗೂ ಜೋರ್ಹತ್‌ನಲ್ಲಿ - ದಿಬ್ರುಗಢ್‌ನ ಖನಿಕರ್ ಆಸ್ಪತ್ರೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. * ಅಸ್ಸಾಂ ಸರ್ಕಾರ ಹಾಗೂ ಟಾಟಾ ಟ್ರಸ್ಟ್ಗಳ ಜಂಟಿ ಉದ್ಯಮದ ಮೂಲಕ ರಾಜ್ಯದಲ್ಲಿ '17' ಕ್ಯಾನ್ಸರ್ ಕೇರ್ ಆಸ್ಪತ್ರೆಗಳ ಮೂಲಕ ದಕ್ಷಿಣ ಏಷ್ಯಾದ ಅತಿದೊಡ್ಡ ಕೈಗೆಟುಕುವ ಕ್ಯಾನ್ಸರ್ ಆಸ್ಪತ್ರೆಗಳ ಜಾಲವಾಗಲಿದೆ ಎಂದಿದ್ದಾರೆ. ಈ ಹಿನ್ನಲೆಯಿಂದಾಗಿ ಧುಬ್ರಿ, ನಲ್ಬರಿ, ಗೋಲ್ಪಾರಾ, ನಾಗಾಂವ್, ಶಿವಸಾಗರ್, ತಿನ್ಸುಕಿಯಾ ಹಾಗೂ ಗೋಲಾಘಾಟ್ನಲ್ಲಿ ಕ್ಯಾನ್ಸರ್ ಕೇರ್ ಆಸ್ಪತ್ರೆಗಳಿಗೆ ಶಂಕುಸ್ಥಾಪನೆ ನೇರವೇರಿಸಿದ್ದಾರೆ. ಪ್ರಸ್ತುತ ಅಸ್ಸಾಂನಲ್ಲಿನ ಈ ಹೊಸ ಆಸ್ಪತ್ರೆಗಳು ಜನರ ಸೇವೆಗೆ ಸಿದ್ದವಾಗಿವೆ ಎಂದಿದ್ದಾರೆ.