Job Description: * ಮುಂಬರುವ ದಿನಗಳಲ್ಲಿ ಎಲ್ಲಾ ಈಶಾನ್ಯ ರಾಜ್ಯಗಳಿಂದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (AFSPA) ತೆಗೆದುಹಾಕಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಅಸ್ಸಾಂ ಹಾಗೂ ಈಶಾನ್ಯ ರಾಜ್ಯದ ಇನ್ನಿತರ ಭಾಗಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತದೆ. ಅಸ್ಸಾಂನ ಕರ್ಬಿ ಅಂಗ್ಲಾಂಗ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಈ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ. * ಪ್ರಸ್ತುತ ಕಳೆದ '08' ವರ್ಷಗಳಲ್ಲಿ ಈಶಾನ್ಯದಲ್ಲಿ ಹಿಂಸಾಚಾರದ ಘಟನೆಗಳು ಶೇ. 75 ರಷ್ಟು ಕಡಿಮೆಯಾಗಿದೆ ಎಂದಿದ್ದಾರೆ, ಇದುವೇ ಸುಧಾರಿತ ಕಾನೂನು ಹಾಗೂ ಸುವ್ಯವಸ್ಥೆಗೆ ಕಾರಣವಾಗಿದೆ ಎಂದಿದ್ದಾರೆ. ಅಸ್ಸಾಂನಲ್ಲಿ ಕಳೆದ 03 ದಶಕಗಳಿಂದ AFSPA ಜಾರಿಯಲ್ಲಿತ್ತು. ಇದೀಗ ಈಶಾನ್ಯ ರಾಜ್ಯಗಳಲ್ಲಿ ಕಳೆದ '08' ವರ್ಷಗಳಲ್ಲಿ ಪರಿಸ್ಥಿತಿಯು ಸುಧಾರಿಸಿದೆ, ಈ ಹಿನ್ನಲೆಯಿಂದಾಗಿ ಸರ್ಕಾರವು AFSPA ತೆಗೆದುಹಾಕಲಗುವದು ಎಂದಿದ್ದಾರೆ. ಪ್ರಸ್ತುತ ತ್ರಿಪುರಾ ಹಾಗೂ ಮೇಘಾಲಯದಲ್ಲಿ ಸುಧಾರಿತ ಕಾನೂನು ಸುವ್ಯವಸ್ಥೆಯಿಂದಾಗಿ ಇದೀಗ ಸರ್ಕಾರವು AFSPA ನ್ನು ತೆಗೆದುಹಾಕಲಿದೆ ಎಂದಿದ್ದಾರೆ.