Job Description: * ಇದೀಗ ಮಧ್ಯಪ್ರದೇಶ ಸರ್ಕಾರವು ರಾಜ್ಯದಲ್ಲಿ ದೇಶೀಯ ಹಸುಗಳನ್ನು ಸಾಕುತ್ತಿರುವ ರೈತರಿಗೆ ಪ್ರತಿ ತಿಂಗಳಿಗೆ 900 ರೂ. ನೀಡುವುದಾಗಿ ಹೇಳಿಕೆ ನೀಡಿದೆ. ಇತ್ತೀಚಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕೃಷಿ ನೀತಿ ಆಯೋಗದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಸಂಧರ್ಭದಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಮಧ್ಯಪ್ರದೇಶ ನೈಸರ್ಗಿಕ ಕೃಷಿ ಅಭಿವೃದ್ಧಿ ಮಂಡಳಿ ಸ್ಥಾಪಿಸುವುದಾಗಿ ಹೇಳಿಕೆ ನೀಡಿದ್ದಾರೆ. * ನೈಸರ್ಗಿಕ ಕೃಷಿಗೆ ದೇಸಿ ಹಸುಗಳು ಅತ್ಯಗತ್ಯವಾಗಿವೆ, ಈ ಹಿನ್ನಲೆಯಿಂದ ರೈತರು ಕನಿಷ್ಠ ಒಂದು ದೇಸಿ ಹಸುವನ್ನು ಸಾಕಬೇಕು ಎಂದಿದ್ದಾರೆ. ಹಾಗೂ ದೇಸಿ ಹಸು ಸಾಕಿರುವ ರೈತರಿಗೆ ತಿಂಗಳಿಗೆ 900 ರೂ.ಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ. ದೇಸಿ ಹಸು ಸಾಕಿರುವ ರೈತ ವರ್ಷದಲ್ಲಿ 10,800 ರೂ. ಹಣವನ್ನು ಪಡೆಯಲಿದ್ದಾರೆ ಎಂದಿದ್ದಾರೆ. * ಇದೀಗ ಸರ್ಕಾರವು ರಾಜ್ಯದ 52 ಜಿಲ್ಲೆಗಳಲ್ಲಿ ತಲಾ 100 ಗ್ರಾಮಗಳಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ವಿಶೇಷ ಕಾರ್ಯಕ್ರಮಗಳನ್ನು ಆರಂಭಿಸಲಿದೆ ಎಂದಿದ್ದಾರೆ. ಇದೀಗ ಖಾರಿಫ್ ಬೆಳೆ ಹಂಗಾಮಿನಲ್ಲಿ ರಾಜ್ಯದ 5,200 ಗ್ರಾಮಗಳಲ್ಲಿ ನೈಸರ್ಗಿಕ ಕೃಷಿ ಕಾರ್ಯಗಳು ಪ್ರಾರಂಭವಾಗಲಿವೆ ಎಂದು ತಿಳಿಸಿದ್ದಾರೆ.