Job Description: * ಪ್ರಸ್ತುತ ಜಗತ್ತಿನಲ್ಲಿ ರಕ್ಷಣಾ ವಲಯಕ್ಕೆ ಅತೀ ಹೆಚ್ಚಿನ ಹಣವನ್ನು ಖರ್ಚು ಮಾಡುವ ದೇಶಗಳ ಪಟ್ಟಿ ಬಿಡುಗಡೆಯಾಗಿದೆ. ಆ ಪಟ್ಟಿಯಲ್ಲಿ ಭಾರತವು ಬ್ರಿಟನ್ ದೇಶವನ್ನು ಹಿಂದಿಕ್ಕಿದ 3 ನೇ ಸ್ಥಾನದಲ್ಲಿದೆ. * ಇತ್ತೀಚಿಗೆ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ರಕ್ಷಣೆಗಾಗಿ ಅತೀ ಹೆಚ್ಚು ಹಣವನ್ನು ಖರ್ಚು ಮಾಡುತ್ತಿರುವ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಈ ಪಟ್ಟಿಯಲ್ಲಿ ಅಮೆರಿಕ, ಚೀನಾ, ಭಾರತ ದೇಶಗಳು ಕ್ರಮವಾಗಿ ಒಂದು, ಎರಡು, ಮತ್ತು 3ನೇ ಸ್ಥಾನಗಳಲ್ಲಿವೆ. * 2021 ರಲ್ಲಿ ವಿಶ್ವ ಮಿಲಿಟರಿ ವೆಚ್ಚವು ಸುಮಾರು ಶೇ. 0.7 ಪ್ರತಿಶತದಷ್ಟು ಹೆಚ್ಚಾಗಿದೆ, ಜಗತ್ತಿನ ಒಟ್ಟಾರೆ ರಕ್ಷಣಾ ವೆಚ್ಚದ ಪೈಕಿ ಶೇ.62 ರಷ್ಟು ವೆಚ್ಚವನ್ನು ಕೇವಲ '05' ದೇಶಗಳು ಖರ್ಚು ಮಾಡುತ್ತಿವೆ ಎಂದು ತಿಳಿದು ಬಂದಿದೆ. ಅದರಲ್ಲಿ ಗರಿಷ್ಠವಾಗಿ 2.1 ಟ್ರಿಲಿಯನ್ ಡಾಲರ್ ನಷ್ಟು ಖರ್ಚು ಮಾಡುತ್ತಿವೆ. ಈ ವರದಿಯ ಪ್ರಕಾರ ಅಮೇರಿಕ ದೇಶವು ಅತೀ ಹೆಚ್ಚು ರಕ್ಷಣಾ ವೆಚ್ಚವನ್ನು ಮೀಸಲಿಟ್ಟಿರುವ ದೇಶವಾಗಿದೆ, ಇದರ ನಂತರ ಚೀನಾದೇಶ ಹಾಗೂ ಭಾರತ ದೇಶಗಳಿವೆ. ಆದರೆ ರಷ್ಯಾ ದೇಶವು 5 ನೇ ಸ್ಥಾನದಲ್ಲಿದೆ. * ಅಮೆರಿಕ ದೇಶದ ಮಿಲಿಟರಿ ವೆಚ್ಚವು 2021 ರಲ್ಲಿ ಸುಮಾರು USD 801 ಶತಕೋಟಿಗೆ ಏರಿಕೆಯಾಗಿದೆ, ಹಾಗೆಯೇ 2021 ರ ಅವಧಿಯಲ್ಲಿ ಅಮೆರಿಕ ಶಸ್ತ್ರಾಸ್ತ್ರ ಖರೀದಿಯ ಮೇಲಿನ ವೆಚ್ಚವನ್ನು ಶೇಕಡಾ 6.4 ರಷ್ಟು ಕಡಿಮೆ ಮಾಡಿದೆ ಎಂದು ವರದಿಯಾಗಿದೆ. ಇದರಂತೆಯೇ 2 ನೇ ಸ್ಥಾನದಲ್ಲಿ ಚೀನಾ ದೇಶವು ಮಿಲಿಟರಿ ವೆಚ್ಚಕ್ಕಾಗಿ 293 ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡಿದೆ, ಭಾರತದ ಮಿಲಿಟರಿ ವೆಚ್ಚವು ಕಳೆದ ವರ್ಷ 76.6 ಶತಕೋಟಿ ಡಾಲರ್'ನಷ್ಟು ಖರ್ಚು ಮಾಡಿ 3 ನೇ ಸ್ಥಾನದಲ್ಲಿದೆ. * ಭಾರತವು 2021 ರ ಮಿಲಿಟರಿ ಬಜೆಟ್‌ನಲ್ಲಿ ಶೇ. 64 ರಷ್ಟು ಬಂಡವಾಳವನ್ನು ದೇಶೀಯವಾಗಿ ಉತ್ಪಾದಿಸಿದ ಶಸ್ತ್ರಾಸ್ತ್ರಗಳ ಸ್ವಾಧೀನಕ್ಕೆ ಮೀಸಲಿಟ್ಟಿತ್ತು ಎಂದು ವರದಿಯಾಗಿದೆ.