Job Description: * 'ಇಮ್ಯಾನುಯೆಲ್ ಮ್ಯಾಕ್ರಾನ್ ಅವರು ಫ್ರಾನ್ಸ್ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ತಮ್ಮ ಪ್ರತಿಸ್ಪರ್ಧಿಯಾಗಿರುವ 'ಮರೀನ್ ಲಿ ಪೆನ್' ಅವರನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲಿಸುವ ಮೂಲಕ ಮ್ಯಾಕ್ರಾನ್ 2 ನೇ ಬಾರಿ ಅಧ್ಯಕ್ಷೀಯ ಪಟ್ಟವನ್ನು ಪಡೆದುಕೊಂಡಿದ್ದಾರೆ. * ಫ್ರಾನ್ಸ್ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಮ್ಯಾಕ್ರಾನ್ ಅವರು ಶೇ.58 ರಷ್ಟು ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ, ಇವರ ಪ್ರತಿಸ್ಪರ್ಧಿ 'ಲೀ ಪೆನ್' ಅವರು ಶೇ.42 ರಷ್ಟು ಮತಗಳನ್ನೂ ಪಡೆದುಕೊಂಡು ಅಧ್ಯಕ್ಷೀಯ ಚುನಾವಣೆಯಿಂದ ಹೊರ ನಡೆದಿದ್ದಾರೆ. * 'ಇಮ್ಯಾನುಯೆಲ್ ಮ್ಯಾಕ್ರಾನ್' ಅವರು ಕಳೆದ ಎರಡು ದಶಕಗಳಲ್ಲಿ ಸತತವಾಗಿ 2 ನೇ ಬಾರಿಗೆ ಆಯ್ಕೆಯಾಗಿರುವ ಮೊದಲ ಅಧ್ಯಕ್ಷರಾಗಿದ್ದಾರೆ. ಫ್ರಾನ್ಸ್ ನ ಅಧ್ಯಕ್ಷೀಯ ಚುನಾವಣೆಯಲ್ಲಿ ಮ್ಯಾಕ್ರಾನ್ ಅವರ ಗೆಲುವು ಯುರೋಪಿಯನ್ ಜನರಿಗೆ ಖುಷಿಯನ್ನು ನೀಡಿದೆ ಎಂದು ಪ್ರಧಾನಿ ಮಾರಿಯೋ ಡ್ರಾಗಿ ಅವರು ಹೇಳಿಕೆ ನೀಡಿದ್ದಾರೆ.