Job Description: * ಇತ್ತೀಚಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಪರಾಧಿಗಳ ಹಾಗೂ ಆರೋಪಿಗಳ ದೈಹಿಕ ಮತ್ತು ಜೈವಿಕ ಮಾದರಿಗಳನ್ನು ಪಡೆಯಲು ಪೊಲೀಸರಿಗೆ ಅಧಿಕಾರ ನೀಡುವ ಕ್ರಿಮಿನಲ್ ಪ್ರೊಸೀಜರ್'ನ ಮಸೂದೆಗೆ ಅವರು ಸಹಿ ಹಾಕಿದ್ದಾರೆ. * ಪ್ರಸ್ತುತ ಕೇಂದ್ರ ಸರ್ಕಾರವು ಈ ಕ್ರಿಮಿನಲ್ ಪ್ರೊಸೀಜರ್ ಐಡೆಂಟಿಫಿಕೇಷನ್ ಬಿಲ್-2022 ನ್ನು ಏಪ್ರಿಲ್ 04 ರಂದು ಲೋಕಸಭೆಯಲ್ಲಿ, ಹಾಗೂ ಏಪ್ರಿಲ್. 06 ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಿದೆ. ಇದಕ್ಕೆ ರಾಷ್ಟ್ರಪತಿಗಳು ಏಪ್ರಿಲ್. 18 ರಂದು ಸಹಿ ಹಾಕಿ ಈ ಮಸೂದೆಗೆ ಕಾನೂನು ರೂಪವನ್ನು ನೀಡಿದ್ದಾರೆ. * ಈ ಹೊಸ ಕಾನೂನಿಗೆ ಸಂಬಂಧಿಸಿರುವ ವ್ಯಕ್ತಿಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಯನ್ನು ರೆಟಿನಾ, ಪಾದದ ಗುರುತುಗಳು ಹಾಗೂ ಬ್ರೈನ್ ಮ್ಯಾಪಿಂಗ್‌'ನ ಮುಖಾಂತರ ಮಾಹಿತಿ ಸಂಗ್ರಹಿಸುವ ಅಧಿಕಾರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಲಭಿಸಲಿದೆ. ಇದೀಗ ಈ ಕಾನೂನನ್ನು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಪ್ರತಿಪಕ್ಷಗಳು ಹೇಳಿಕೆ ನೀಡಿವೆ. * ಪ್ರಸ್ತುತ ಬಂಧನಕ್ಕೊಳಗಾದ ಯಾವುದೇ ವ್ಯಕ್ತಿಯ ವೈಯಕ್ತಿಕ ಜೈವಿಕ ದತ್ತಾಂಶವನ್ನು ಸಂಗ್ರಹಿಸಲು ಈ ಮಸೂದೆ ಸಹಾಯ ಮಾಡಲಿದೆ. ಹಾಗೂ ಇದರಲ್ಲಿ ಬೆರಳಚ್ಚು, ರೆಟಿನಾ ಸ್ಕ್ಯಾನ್, ಭೌತಿಕ ಮತ್ತು ಜೈವಿಕ ಮಾದರಿಗಳು ಹಾಗೂ ಅವುಗಳ ವಿಶ್ಲೇಷಣೆ, ಸಹಿ, ಕೈಬರಹ ಅಥವಾ ಇನ್ನಿತರ ಮಾಹಿತಿಯನ್ನು ಸಂಗ್ರಹಿಸಲು ಪೊಲೀಸರಿಗೆ ಅವಕಾಶ ಕಲ್ಪಿಸಲಾಗಿದೆ. * ಇದೀಗ ಖೈದಿಗಳ ಗುರುತಿಸುವಿಕೆ ಕಾಯಿದೆ-1920 ರ ಬದಲಾಗಿ ಕ್ರಿಮಿನಲ್ ಪ್ರೊಸೀಜರ್'ನ ಕಾಯ್ದೆ ಅಡಿಯಲ್ಲಿ ಜಾರಿಗೆ ತರಲಾಗಿದೆ. ಈ ಮೊದಲಿನ ಹಳೆ ಕಾಯ್ದೆ ಅಡಿಯಲ್ಲಿ ಕೇವಲ ಶಿಕ್ಷೆಗೊಳಗಾಗಿರುವ ಅಥವಾ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಬಗೆಗಿನ ಸೀಮಿತ ಮಾಹಿತಿಯನ್ನು ಸಂಗ್ರಹಿಸುವ ಅವಕಾಶವನ್ನು ನೀಡಲಾಗಿದೆ. ಈ ಮೊದಲು ಕೇವಲ ಬೆರಳಚ್ಚು ಹಾಗೂ ಹೆಜ್ಜೆ ಗುರುತುಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತಿತ್ತು ಎಂದು ತಿಳಿಸಿದ್ದಾರೆ.