Job Description: * ಭಾರತವು ವಾರ್ಷಿಕವಾಗಿ ಸುಮಾರು 8.5 ಲಕ್ಷ ಕೋಟಿ ಮೌಲ್ಯದ ಹಾಲನ್ನು ಉತ್ಪಾದಿಸಲಾಗುತ್ತದೆ, ಹಾಗೂ ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. * ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿನ ದಿಯೋದರ್‌ನಲ್ಲಿ ಬನಾಸ್ ಡೈರಿಯ ಹೊಸ ಸಂಕೀರ್ಣ ಹಾಗೂ ಆಲೂಗಡ್ಡೆ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದ್ದಾರೆ. ಇದೀಗ ನಮ್ಮ ಸರ್ಕಾರದ ಅವಧಿಯಲ್ಲಿ ಸಂಪೂರ್ಣ 100 ಪೈಸೆ ಉದ್ದೇಶಿತ ಫಲಾನುಭವಿಗಳಿಗೆ ತಲುಪಲಿದೆ ಹಾಗೂ ರೈತರ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತಿದೆ' ಎಂದಿದ್ದಾರೆ. * ಇದೀಗ ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿದೆ, ಪ್ರಸ್ತುತ ಗೋಧಿ ಹಾಗೂ ಅಕ್ಕಿಯ ವಹಿವಾಟುಗಿಂತಲೂ ಅಧಿಕವಾಗಿದೆ. ಇದೀಗ ಸಣ್ಣ ರೈತರು ಸಹಕಾರಿ ಹೈನುಗಾರಿಕೆ ಕ್ಷೇತ್ರದ ದೊಡ್ಡ ಫಲಾನುಭವಿಗಳಾಗಿದ್ದಾರೆ. ಇದೀಗ ಹೈನುಗಾರಿಕೆಯು ವಿಶೇಷವಾಗಿ ಮಹಿಳೆಯರನ್ನು ಬಲಿಷ್ಠಗೊಳಿಸುತ್ತಿದೆ, ಹಾಗೂ ಅವರನ್ನು ಆರ್ಥಿಕವಾಗಿ ಬಲಪಡಿಸುತ್ತದೆ ಎಂದಿದ್ದಾರೆ. * ಇದೀಗ ಪ್ರಧಾನಿಯವರು ಬನಾಸ್ ಸಮುದಾಯ ರೇಡಿಯೊ ಸ್ಟೇಷನ್ ಹಾಗೂ ಪಾಲನ್‌ಪುರದಲ್ಲಿ ಚೀಸ್ ಉತ್ಪನ್ನಗಳು, ಹಾಲಿನ ಪುಡಿ ಉತ್ಪಾದನೆಗೆ ವಿಸ್ತೃತ ಸೌಲಭ್ಯಗಳು, ಹಾಗೂ ಸಾವಯವ ಗೊಬ್ಬರ ಹಾಗೂ ಜೈವಿಕ ಅನಿಲ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. 100 ಟನ್ ಸಾಮರ್ಥ್ಯದ '04' ಗೋಬರ್ ಗ್ಯಾಸ್ ಘಟಕಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ.