Job Description: * ಕೊಲಂಬಿಯಾ ಫುಟ್ಬಾಲ್ ತಂಡದ ಮಾಜಿ ನಾಯಕರಾಗಿದ್ದ ಫ್ರೆಡ್ಡಿ ರಿಂಕನ್ ಅವರು ಕಾರು ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟಿದ್ದಾರೆ. * ರಿಯಲ್ ಮ್ಯಾಡ್ರಿಡ್ ಕ್ಲಬ್ ನ ಮಾಜಿ ಮಿಡ್‌ ಫೀಲ್ಡರ್ ಆಗಿದ್ದ ರಿಂಕನ್ ಅವರು ಕೊಲಂಬಿಯಾದ ಪರವಾಗಿ 17 ಗೋಲುಗಳನ್ನು ಬಾರಿಸಿದ್ದರು. 1990, 1994 ಮತ್ತು 1998 ರಲ್ಲಿನ ವಿಶ್ವಕಪ್‌ಗಳಲ್ಲಿ ತಂಡದ ಪರವಾಗಿ ಆಟವಾಡಿದ್ದರು. ಇವರು 10 ವಿಶ್ವಕಪ್ ಪಂದ್ಯಗಳಲ್ಲಿ ಆಡಿದರು ಹಾಗೆಯೇ ವಿಶ್ವಕಪ್ ಪಂದ್ಯಗಳಲ್ಲಿ ಅತೀ ಹೆಚ್ಚಾಗಿ ಆಡಿದ್ದಾರೆ. * ರಿಂಕನ್ ಅವರು ಈ ಹಿಂದೆ 1990 ರಲ್ಲಿ ವಿಶ್ವಕಪ್ ಗೆ ಅರ್ಹತೆ ಪಡೆದ ಕೊಲಂಬಿಯಾ ತಂಡದ ಆಟಗಾರರಾಗಿದ್ದರು. ಪಶ್ಚಿಮ ಜರ್ಮನಿ ವಿರುದ್ಧ 1-1 ಡ್ರಾದಲ್ಲಿ ಸ್ಮರಣೀಯ ಗೋಲು ಗಳಿಸಿದ್ದಾರೆ. * ಫ್ರೆಡ್ಡಿ ಯುಸೆಬಿಯೊ ರಿಂಕನ್ ವೇಲೆನ್ಸಿಯಾ ಅವರು ಕೊಲಂಬಿಯಾದ ವೃತ್ತಿಪರ ಫುಟ್‌ಬಾಲ್ ಆಟಗಾರರಾಗಿದ್ದಾರೆ. ಇವರು 1990 ರಿಂದ 2001 ರ ನಡುವೆ ಕೊಲಂಬಿಯಾ ರಾಷ್ಟ್ರೀಯ ತಂಡಕ್ಕಾಗಿ 84 ಪಂದ್ಯಗಳನ್ನು ಆಡಿದ್ದಾರೆ. ಇವರು ಕ್ಲಬ್ ಮಟ್ಟದಲ್ಲಿ ಕೊಲಂಬಿಯಾ, ಇಟಲಿ, ಬ್ರೆಜಿಲ್ ಗಾಗಿ ಆಡಿದ್ದರು.