Job Description: * ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಅವರು 3.12 ಲಕ್ಷ ಕೋಟಿ ಬೆಲೆ ನಿಗದಿ ಪಡಿಸಿ ಟ್ವಿಟರ್‌ ಕಂಪನಿಯನ್ನು ಖರೀದಿಸಲು ಒಲವು ತೋರಿದ್ದಾರೆ. ಇತ್ತೀಚಿಗಷ್ಟೇ ಎಲಾನ್‌ ಮಸ್ಕ್‌ ಅವರು ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್‌ನ ಆಡಳಿತ ಮಂಡಳಿಗೆ ಸೇರಲು ನಿರಾಕರಿಸಿದ್ದರು. * ಟ್ವಿಟರ್‌ನ ಪ್ರತಿ ಷೇರಿಗೆ 54.20 ಡಾಲರ್‌ ಹಣವನ್ನು ಕೊಡುವುದಾಗಿ ಎಲಾನ್‌ ಮಸ್ಕ್‌ ಅವರು ಷೇರುಪೇಟೆ ನಿಯಂತ್ರಣ ಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಪ್ರಸ್ತುತ ಟ್ವಿಟರ್‌ನ ಪ್ರತಿ ಷೇರು 45.85 ಡಾಲರ್‌ಗಳಲ್ಲಿ ವಹಿವಾಟನ್ನು ನಡೆಸುತ್ತಿದೆ. * ಪ್ರಸ್ತುತ ಟ್ವಿಟರ್‌ನಲ್ಲಿ ಎಲಾನ್‌ ಮಸ್ಕ್ ಅವರು ಶೇಕಡ 9.2 ರಷ್ಟು ಷೇರುಗಳನ್ನು ಹೊಂದಿದ್ದಾರೆ. ಪೂರ್ಣ ಶೇ. 100 ರಷ್ಟು ಷೇರುಗಳನ್ನು ಖರೀದಿಸಲು ಒಲವನ್ನು ತೋರಿದ್ದಾರೆ. * ಪ್ರಸ್ತುತ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ನಲ್ಲಿ 8 ಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. * Twitter ಒಂದು ಅಮೇರಿಕನ್ ಮೈಕ್ರೋಬ್ಲಾಗಿಂಗ್ ಹಾಗು ಸಾಮಾಜಿಕ ನೆಟ್‌ವರ್ಕಿಂಗ್ ಸೇವೆಯಾಗಿದೆ, ಈ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು 'ಟ್ವೀಟ್‌ಗಳು' ಅಂದರೆ ಸಂದೇಶಗಳನ್ನು ಪೋಸ್ಟ್ ಮಾಡುತ್ತಾರೆ. ಈ ಜಾಲತಾಣಕ್ಕೆ ನೋಂದಾಯಿತ ಬಳಕೆದಾರರು ಟ್ವೀಟ್‌ಗಳನ್ನು ಪೋಸ್ಟ್ ಮಾಡಬಹುದು, ಇಷ್ಟಪಡಬಹುದು ಹಾಗೂ ಅವುಗಳಿಗೆ ಮರುಟ್ವೀಟ್ ಮಾಡಬಹುದು, ಆದರೆ ನೋಂದಾಯಿಸಿಕೊಳ್ಳದ ಬಳಕೆದಾರರು ಸಾರ್ವಜನಿಕವಾಗಿ ಲಭ್ಯವಿರುವುದನ್ನು ಮಾತ್ರ ಓದಬಹುದಾಗಿದೆ. * ಟ್ವಿಟ್ಟರ್ ಪ್ರಪಂಚದಾದ್ಯಂತ 25 ಕ್ಕೂ ಅಧಿಕ ಕಚೇರಿಗಳನ್ನು ಹೊಂದಿದೆ. ಟ್ವಿಟರ್ ನ್ನು 2006 ರ ಮಾರ್ಚ್ ನಲ್ಲಿ ಜಾಕ್ ಡಾರ್ಸೆ, ನೋಹ್ ಗ್ಲಾಸ್, ಬಿಜ್ ಸ್ಟೋನ್ ಹಾಗೂ ಇವಾನ್ ವಿಲಿಯಮ್ಸ್ ರಚಿಸಿದ್ದಾರೆ. ಬಹುಪಾಲು ಟ್ವೀಟ್‌ಗಳನ್ನು ಅಲ್ಪಸಂಖ್ಯಾತ ಬಳಕೆದಾರರಿಂದ ಬರೆಯಲಾಗುತ್ತದೆ.