Job Description: * ಪ್ರಸ್ತುತ ಪಾಕಿಸ್ತಾನದ ವಿರೋಧ ಪಕ್ಷದ ನಾಯಕರಾಗಿರುವ 'ಶಾಹಬಾಝ್ ಷರೀಫ್' ಅವರು ಪಾಕಿಸ್ತಾನದ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಮತದಾನದಿಂದಾಗಿ ಪ್ರಧಾನಿ ಇಮ್ರಾನ್‌ ಖಾನ್‌ ಪದಚ್ಯುತಗೊಂಡಿದ್ದಾರೆ. * ಈ ಹಿಂದೆ '03' ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ತಮ್ಮ 'ಶಾಹಬಾಝ್' ಅವರು ಇದೀಗ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. * ಇತ್ತೀಚಿಗೆ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಸಂಸದರು ನೂತನ ಪ್ರಧಾನಿ ಆಯ್ಕೆ ಬಹಿಷ್ಕರಿಸಿದ್ದರು, ಆದರೂ ನೂತನ ಪ್ರಧಾನಿ ಆಯ್ಕೆ ಪ್ರಕ್ರಿಯೇ ಜರುಗಿದೆ ಇದೀಗ ಆ ಸಂಸದರು ರಾಜೀನಾಮೆ ನೀಡಿದ್ದಾರೆ. * ಪಾಕಿಸ್ತಾನ ಸರ್ಕಾರದ 342 ಸದಸ್ಯ ಬಲದ ಸಂಸತ್‌ನಲ್ಲಿ ಇಮ್ರಾನ್‌ ಖಾನ್‌ ವಿರುದ್ಧವಾಗಿ ಅವಿಶ್ವಾಸ ನಿರ್ಣಯದ ಪರವಾಗಿ 174 ಮತಗಳು ಚಲಾವಣೆಯಾಗಿವೆ, ಈ ಹಿನ್ನಲೆಯಿಂದಾಗಿ ಇಮ್ರಾನ್‌ ಖಾನ್ ಪ್ರಧಾನಿ ಸ್ಥಾನವನ್ನು ತ್ಯಜಿಸಿ ಹೊರ ನಡೆಯಬೇಕಾಯಿತು. * ಮಿಯಾನ್ ಮುಹಮ್ಮದ್ ಶಹಬಾಜ್ ಷರೀಫ್ ಅವರು ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್-ಎನ್) ನ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಇವರು ತಮ್ಮ ರಾಜಕೀಯ ಜೀವನದಲ್ಲಿ'03' ಬಾರಿ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. * 1988 ರಲ್ಲಿ ಪಂಜಾಬ್‌ನ ಪ್ರಾಂತೀಯ ಅಸೆಂಬ್ಲಿಗೆ ಹಾಗೂ 1990 ರಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ಶೆಹಬಾಜ್ ಚುನಾಯಿತರಾದರು. ನಂತರ 1997 ಫೆಬ್ರವರಿ. 20 ರಂದು ಮೊದಲ ಬಾರಿಗೆ ಪಾಕಿಸ್ತಾನದ ಅತ್ಯಂತ ಜನನಿಬಿಡ ಪ್ರಾಂತ್ಯವಾದ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಚುನಾಯಿತರಾದರು. ಮತ್ತೇ 2008 ರ ಪಾಕಿಸ್ತಾನಿ ಸಾರ್ವತ್ರಿಕ ಚುನಾವಣೆಯಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ PML-N ವಿಜಯದ ನಂತರ ಶೆಹಬಾಜ್ 2 ನೇ ಅವಧಿಗೆ ಮುಖ್ಯಮಂತ್ರಿಯಾಗಿ ನೇಮಕಗೊಂಡರು. ಮತ್ತೇ 2013 ರಲ್ಲಿ 3 ನೇ ಬಾರಿಗೆ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ತಡ ನಂತರ 2018 ರ ಚುನಾವಣೆಯ ನಂತರ ವಿರೋಧ ಪಕ್ಷದ ನಾಯಕರಾಗಿ ನಾಮನಿರ್ದೇಶನಗೊಂಡರು.