Job Description: * ಪ್ರಸ್ತುತ 2022 ರ ಹೆಲ್ತ್ ಬೆನಿಫಿಟ್ ಪ್ಯಾಕೇಜ್'ನ ಹೊಸ ಆವೃತ್ತಿಯನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಅಡಿಯಲ್ಲಿ ಆರಂಭಿಸಲಾಗಿದೆ. * ಈ ಹೊಸ ಆವೃತ್ತಿಯಲ್ಲಿ 365 ಹೊಸ ಕಾರ್ಯವಿಧಾನಗಳನ್ನು ಸೇರ್ಪಡೆ ಮಾಡಲಾಗಿದೆ. ಹಾಗೂ ನಗರದ ಪ್ರಕಾರ ಹಾಗೂ ಆರೈಕೆಯ ಮಟ್ಟವನ್ನು ಆಧರಿಸಿ ವಿಭಿನ್ನ ಬೆಲೆಗಳನ್ನು ಪರಿಚಯಿಸಲಾಗಿದೆ. ಈ ಪ್ಯಾಕೇಜ್ ನ್ನು 2022 ರ ಏಪ್ರಿಲ್. 07 ರಂದು ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ಎರಡು ದಿನಗಳ ಸಭೆಯಲ್ಲಿ ಆರಂಭಿಸಲಾಗಿದೆ. * ಇತ್ತೀಚಿಗೆ ತಮಿಳನಾಡಿನಲ್ಲಿ ಆಯೋಜಿಸಿರುವ ಈ ಸಭೆಯ ಮೂಲಕ ದೇಶದ ದಕ್ಷಿಣ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಹಾಗೂ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ನ್ನು ಪರಿಶೀಲಿಸಲಾಗುತ್ತದೆ ಎಂದಿದ್ದಾರೆ. * ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ರೋಗಿಗಳ ವರ್ಗೀಕರಣ ವ್ಯವಸ್ಥೆಗಳ ಮೂಲಕ ನೂತನ ಉಪಕ್ರಮವನ್ನು ಘೋಷಣೆ ಮಾಡಲಾಗಿದೆ. AB-PMJAY'ಗಾಗಿ ಇಂಟರ್ನ್ಯಾಷನಲ್ ಕ್ಲಾಸಿಫಿಕೇಶನ್ ಆಫ್ ಹೆಲ್ತ್ ಇಂಟರ್ವೆನ್ಶನ್ ಹಾಗೂ ICD-11 ಮೂಲಕ ರೋಗಿಗಳ ವರ್ಗೀಕರಣವನ್ನು ಮಾಡಲಾಗುತ್ತದೆ. * ಪ್ರಸ್ತುತ ಹರ್ಯಾಣ, ಛತ್ತೀಸ್‌ಗಢ, ಮಹಾರಾಷ್ಟ್ರ, ಕೇರಳ ಹಾಗೂ ಮೇಘಾಲಯ ರಾಜ್ಯಗಳಲ್ಲಿ ಡಯಾಗ್ನಾಸಿಸ್ ರಿಲೇಟೆಡ್ ಗ್ರೂಪಿಂಗ್ (DRG) ನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಇದರ ಜೊತೆಗೆ DRG ಮೂಲಕ ಪಾವತಿ ಕಾರ್ಯವಿಧಾನವನ್ನು ಕಲ್ಪಿಸಲು ಭಾರತದಲ್ಲಿನ ಮೊದಲ ವಿಮಾ ಯೋಜನೆ AB-PMJAY ಆಗಿರಲಿದೆ ಎಂದಿದ್ದಾರೆ.