Job Description: * ಪ್ರತಿ ವರ್ಷವು ಮಾರ್ಚ್. 24 ರಂದು 'ವಿಶ್ವ ಕ್ಷಯರೋಗ ದಿನ(World Tuberculosis Day)'ವನ್ನು ಆಚರಣೆ ಮಾಡಲಾಗುತ್ತದೆ. ಈ ದಿನದಂದು ಕ್ಷಯರೋಗದ ಜಾಗತಿಕ ಸಾಂಕ್ರಾಮಿಕ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. * ಟಿಬಿಯನ್ನು ಕೊನೆಗೊಳಿಸಲು ಹೂಡಿಕೆ ಮಾಡಿ, ಜೀವ ಉಳಿಸಿ ಎಂಬುವದು 2022 ನೇ ವರ್ಷದ ಧ್ಯೆಯೇ ವ್ಯಾಕ್ಯವಾಗಿದೆ. * ಡಾ. ರಾಬರ್ಟ್ ಕೋಚ್ ಅವರು ಈ ಹಿಂದೆ 1882 ರಲ್ಲಿ ಕ್ಷಯರೋಗಕ್ಕೆ (TB) ಕಾರಣವಾಗುವ ಬ್ಯಾಕ್ಟೀರಿಯಾವನ್ನು ಕಂಡುಹಿಡಿದರು. ಈ ಹಿನ್ನಲೆಯಿಂದಾಗಿ ಈ ದಿನವನ್ನು TB ದಿನ ಎಂದು ಆಚರಣೆ ಮಾಡಲಾಗುತ್ತಿದೆ. * ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿರುವ ಪ್ರಕಾರ TB ಪ್ರಪಂಚದ ಅತ್ಯಂತ ಮಾರಣಾಂತಿಕ ಸಾಂಕ್ರಾಮಿಕ ರೋಗವಾಗಿದೆ. ಪ್ರತಿ ದಿನವು ಸರಿ ಸುಮಾರು 4100 ಕ್ಕೂ ಅಧಿಕ ಜನರು ಟಿಬಿಗೆ ಬಲಿಯಾಗುತ್ತಿದ್ದಾರೆ. ಒಂದು ದಶಕದಲ್ಲಿ ಮೊದಲ ಬಾರಿಗೆ 2020 ರಲ್ಲಿ TB ಸಾವುಗಳು ಅತೀ ಹೆಚ್ಚಾಗಿದೆ. ವರದಿಯಾಗಿರುವ ಅಂಕಿ-ಅಂಶಗಳ ಪ್ರಕಾರ 2020 ರಲ್ಲಿ 15,00,000 ಜನರು TB ಯಿಂದಾಗಿ ಮೃತಪಟ್ಟಿದ್ದಾರೆ. * ಈ ಕ್ಷಯ ರೋಗವು ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕಾಗಿದೆ. ಈ ರೋಗವು ಮೈಕೋಬ್ಯಾಕ್ಟೀರಿಯಂ ಕ್ಷಯ ಎಂಬ ಬ್ಯಾಕ್ಟೀರಿಯಂನಿಂದ ಹರಡುತ್ತದೆ ಎಂದು ಹೈದರಾಬಾದ್‌ನ ವಿಐಎನ್ ಆಸ್ಪತ್ರೆಯ ಕನ್ಸಲ್ಟೆಂಟ್ ವೈದ್ಯ ಡಾ.ರಾಜೇಶ್ ವುಕ್ಕಲಾ ವರದಿ ಮಾಡಿದ್ದಾರೆ. * * ಟಿಬಿ ಕಾಯಿಲೆಯ ಲಕ್ಷಣಗಳು : - ಕೆಮ್ಮು, ಎದೆ ನೋವು, ಸುಸ್ತು, ತೂಕ ಇಳಿಕೆ, ಜ್ವರ, ರಾತ್ರಿ ಬೆವರು. ಹಾಗೂ ಶೀತ ಮತ್ತು ಹಸಿವಿನ ಕೊರತೆ ಇವೆಲ್ಲವು ಕ್ಷಯ ರೋಗದ ಲಕ್ಷಣಗಳಾಗಿವೆ.