Job Description: * ಇತ್ತೀಚಿಗೆ ನೇಪಾಳದ ಭೋಜ್‌ಪುರ ಜಿಲ್ಲೆಯಲ್ಲಿ ಭಾರತದ ಸಹಾಯದಿಂದ ನಿರ್ಮಿಸಲಾಗಿರುವ ಮಹಾತ್ಮ ಗಾಂಧಿ ಸ್ಮಾರಕ ಆಸ್ಪತ್ರೆಯ ಕಟ್ಟಡವನ್ನು ಉದ್ಘಾಟಿಸಲಾಗಿದೆ. * ನೇಪಾಳ ನ ಕಠ್ಮಂಡು ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿರುವ ಮಾಹಿತಿಯ ಪ್ರಕಾರ, ಭಾರತೀಯ ಉಪ ಮುಖ್ಯಸ್ಥ ನಮ್ಗ್ಯಾ ಸಿ ಖಂಪಾ ಹಾಗೂ ನೇಪಾಳದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಜ್ಞಾನೇಂದ್ರ ಬಹದ್ದೂರ್ ಕರ್ಕಿ ಅವರ ಜೊತೆಗೆ ಅನೇಕ ಸಚಿವರು ಭಾಗಿಯಾಗಿ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿದ್ದಾರೆ. * ನೇಪಾಳಕ್ಕೆ ಭಾರತ ಸರ್ಕಾರದ ನಿರಂತರ ಬೆಂಬಲವನ್ನು ಅಲ್ಲಿನ ಸಚಿವ ಕರ್ಕಿ ಶ್ಲಾಘಿಸಿದ್ದಾರೆ. ನೇಪಾಳಿ ರೂ. 22.60 ಮಿಲಿಯನ್ ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಹಾಗೂ ಈ ಯೋಜನೆಯು ಭಾರತದ ಸ್ವಾತಂತ್ರ್ಯದ 75 ಆಜಾದಿ ಕಾ ಅಮೃತ್ ಮಹೋತ್ಸವ'ದ ಭಾಗವಾಗಿ ನೇಪಾಳದಲ್ಲಿ ಉದ್ಘಾಟನೆಗೊಳ್ಳುವ 75 ಯೋಜನೆಗಳಲ್ಲಿ ಇದು ಕೂಡ ಒಂದಾಗಿದೆ. * ಈ ಆಸ್ಪತ್ರೆಯಲ್ಲಿ ಹೆರಿಗೆ ವಿಭಾಗ, 24 ಗಂಟೆಗಳ ತುರ್ತು ಪರೀಕ್ಷಾ ಕೊಠಡಿಗಳು, ಮಕ್ಕಳ ವಾರ್ಡ್, ಆಪರೇಷನ್ ಥಿಯೇಟರ್, ವೇಟಿಂಗ್ ಹಾಲ್, ಪೆಥಾಲಜಿ ಲ್ಯಾಬ್, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಕೊಠಡಿಗಳು, ಕಚೇರಿ, ಮಹಿಳೆಯರು ಹಾಗೂ ಅತಿಥಿಗಳಿಗೆ ಶೌಚಾಲಯಗಳು, ಪೀಠೋಪಕರಣಗಳು ಇದೆಲ್ಲದರ ಜೊತೆಗೆ ಆಸ್ಪತ್ರೆಯ 15 ಹಾಸಿಗೆಗಳ ಒಳಾಂಗಣ ಸಾಮರ್ಥ್ಯವನ್ನು ಹೊಂದಿದೆ. * ಭಾರತವು ಈ ಹಿಂದೆ 2003 ರಿಂದ ನೇಪಾಳದಲ್ಲಿ 523 ಹೈ ಇಂಪ್ಯಾಕ್ಟ್ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದೆ, ಇದೀಗ ಅದರಲ್ಲಿ 467 ಯೋಜನೆಗಳನ್ನು ಪೂರ್ಣಗೊಳಿಸಿದೆ ಎಂದು ಪ್ರಕಟಿಸಿದೆ. ಭಾರತ ಹಾಗೂ ನೇಪಾಳ ಬಹಳ ವಿಶಾಲ ವ್ಯಾಪ್ತಿಯನ್ನು ಹೊಂದಿವೆ.