Job Description: * ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮಾರ್ಚ್. 21 ರಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಅವರ ಜೊತೆಗೆ ವರ್ಚುಲ್ ಶೃಂಗಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧ ಮತ್ತಷ್ಟು ವೃದಿಸುವ ನಿಟ್ಟಿನಲ್ಲಿ ಅನೇಕ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಗಳಿವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಅವರು ತಿಳಿಸಿದ್ದಾರೆ. * ಈ ವರ್ಚುಲ್ ಸಭೆಯಲ್ಲಿ ಭದ್ರತಾ ಪಡೆಗಳಿಗೆ ಶಸ್ತ್ರಾಸ್ತ್ರ, ಯುದ್ಧಸಾಮಗ್ರಿಗಳ ಸಾಗಣೆ, ಸೇನಾ ನೆಲೆಗಳ ಬಳಕೆ ಇನ್ನಿತರ ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ವೃದಿಸಲು ಮಹತ್ವದ ಒಪ್ಪಂದಕ್ಕೆ ಉಭಯ ರಾಷ್ಟ್ರಗಳ ನಾಯಕರು ಒಪ್ಪಿಕೊಂಡು ಸಹಿ ಹಾಕಲಿದ್ದಾರೆ. * ಉಭಯ ದೇಶಗಳ ನಾಯಕರು ಸೈಬರ್‌ ಹಾಗೂ ಸೈಬರ್‌ ಆಧಾರಿತ ತಂತ್ರಜ್ಞಾನ, ಗಣಿಗಾರಿಕೆ, ಮಿಲಿಟರಿ ತಂತ್ರಜ್ಞಾನ, ವೃತ್ತಿಪರ ಶಿಕ್ಷಣ ಮತ್ತು ಜಲಸಂಪನ್ಮೂಲ ನಿರ್ವಹಣೆ ಕ್ಷೇತ್ರಗಳಿಗೆ ಸಂಬಂಧಪಟ್ಟಿರುವ ಈ ದ್ವಿಪಕ್ಷೀಯ ಸಹಕಾರ ಒಪ್ಪಂದದಿಂದಾಗಿ ಇನ್ನಷ್ಟು ಬಲಿಷ್ಠವಾಗಲಿದೆ ಎಂದಿದ್ದಾರೆ. ಅನೇಕ ವರ್ಷಗಳಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸ್ನೇಹವು ಬೆಳೆದುಕೊಂಡು ಬಂದಿದೆ. * ನರೇಂದ್ರ ದಾಮೋದರದಾಸ್ ಮೋದಿಯವರು ಭಾರತೀಯ ರಾಜಕಾರಣಿಯಾಗಿದ್ದಾರೆ, ಗುಜರಾತ ರಾಜ್ಯದ 14 ನೇ ಹಾಗೂ 2014 ರಿಂದ ಪ್ರಸ್ತುತ ಭಾರತದ ಪ್ರಧಾನಿ ಯಾಗಿದ್ದಾರೆ. ಮೋದಿಜೀ ಅವರು ಭಾರತೀಯ ಜನತಾ ಪಕ್ಷ ಹಾಗೂ RSS ಸದಸ್ಯರಾಗಿದ್ದಾರೆ.