Job Description: * ಇದೀಗ ಉಕ್ರೇನ್ ರಾಷ್ಟ್ರವು ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (NATO) ಸದಸ್ಯನಾಗುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ತಿಳಿಸಿದ್ದಾರೆ. ಕಾರಣ ಪ್ರಸ್ತುತ ರಷ್ಯಾ ಹಾಗೂ ಉಕ್ರೇನ್ ಯುದ್ಧದ ಸಮಯದಲ್ಲಿ ನ್ಯಾಟೋ ಉಕ್ರೇನ್ ನೆರವಿಗೆ ಬಾರದೆ ಇರುವ ಕಾರಣದಿಂದಾಗಿ ಉಕ್ರೇನ್ ಅಧ್ಯಕ್ಷ ಈ ಹೇಳಿಕೆಯನ್ನು ನೀಡಿದ್ದಾರೆ. * ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (NATO) ಇದನ್ನು ಸಾಮಾನ್ಯವಾಗಿ ನಾರ್ತ್ ಅಟ್ಲಾಂಟಿಕ್ ಅಲೈಯನ್ಸ್ ಎಂದು ಕರೆಯುತ್ತಾರೆ, ಇದೊಂದು 28 ಯುರೋಪಿಯನ್ ದೇಶಗಳು ಹಾಗೂ 2 ಉತ್ತರ ಅಮೆರಿಕಾದ ದೇಶಗಳ ನಡುವಿನ ಅಂತರಸರ್ಕಾರಿ ಮಿಲಿಟರಿ ಮೈತ್ರಿಯಾಗಿದೆ. ಇದನ್ನು ಈ ಹಿಂದೆ 2ನೇ ವಿಶ್ವ ಯುದ್ಧದ ನಂತರ ಸ್ಥಾಪಿಸಲಾಗಿರುವ ಸಂಸ್ಥೆಯಾಗಿದೆ. ಇದಕ್ಕೆ ಈ ಹಿಂದೆ 1949 ರ ಏಪ್ರಿಲ್. 04 ರಂದು ಸಹಿ ಮಾಡುವದರ ಜೊತೆಗೆ ಉತ್ತರ ಅಟ್ಲಾಂಟಿಕ್ ಒಪ್ಪಂದವನ್ನು ಕಾರ್ಯಗತಗೊಳಿಸಲಾಗಿದೆ. * ಪ್ರಸ್ತುತ NATO ಸಾಮೂಹಿಕ ಭದ್ರತೆಯ ವ್ಯವಸ್ಥೆಯನ್ನು ನಿರ್ವಹಿಸುತ್ತದೆ, ಇದರ ಸ್ವತಂತ್ರ ಸದಸ್ಯ ರಾಷ್ಟ್ರಗಳು ಬೇರೆ ಯಾವುದೇ ಬಾಹ್ಯ ಪಕ್ಷದ ದಾಳಿಗೆ ಒಳಗಾದರೆ ಅದಕ್ಕೆ ಪ್ರತಿಕ್ರಿಯೆಯಾಗಿ ಪರಸ್ಪರ ರಕ್ಷಣೆಗೆ ನಿಂತುಕೊಳ್ಳುತ್ತವೆ. ಈ ಮೊದಲಿನ ಸೋವಿಯತ್ ಒಕ್ಕೂಟದ ಬೆದರಿಕೆಗೆ ಪ್ರತಿಕ್ರಿಯೆ ನೀಡುವ ಸಲುವಾಗಿ ಶೀತಲ ಸಮರದ ಸಮಯದಲ್ಲಿ ಇದನ್ನು ಸ್ಥಾಪನೆ ಮಾಡಲಾಗಿದೆ. ಆಗಿನಿಂದಲೂ ಅಂದರೆ ಈ ಶೀತಲ ಸಮರದ ಅಂತ್ಯದಿಂದ ಈ ಮೈತ್ರಿಯು ಸ್ಥಳದಲ್ಲಿಯೇ ಉಳಿದುಕೊಂಡಿದೆ ಹಾಗೂ ಬಾಲ್ಕನ್ಸ್, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾದಲ್ಲಿ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿವೆ. * ಪ್ರಸ್ತುತ NATO ತನ್ನ ಪ್ರಧಾನ ಕಛೇರಿಯುನ್ನು ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ಹೊಂದಿದೆ, ಹಾಗೂ ಇದರ ಅಲೈಡ್ ಕಮಾಂಡ್ ಕಾರ್ಯಾಚರಣೆಗಳ ಪ್ರಧಾನ ಕಛೇರಿಯು ಬೆಲ್ಜಿಯಂನ ಮೊನ್ಸ್ ಹತ್ತಿರದಲ್ಲಿದೆ. ಈ ನ್ಯಾಟೋ ಸಂಸ್ಥೆಯ 'ವಿಚಾರಣೆಯಲ್ಲಿ ಅನಿರ್ಬಂಧಿತ ಮನಸ್ಸು' ಎಂಬ ಧ್ಯೇಯವಾಕ್ಯವನ್ನು ಹೊಂದಿದೆ. * ಈ ನ್ಯಾಟೋ ಸಂಸ್ಥೆ ಸ್ಥಾಪನೆಯಾದ ನಂತರ, ಹೊಸ ಸದಸ್ಯ ರಾಷ್ಟ್ರಗಳ ಸೇರಿಸಿಕೊಳ್ಳುವ ಮೂಲಕ ಈ ಮೊದಲಿನ 12 ದೇಶಗಳಿಂದ ಮೈತ್ರಿಯನ್ನು 30 ದೇಶಗಳಿಗೆ ಹೆಚ್ಚಿಸಲಾಗಿದೆ. ಇತ್ತೀಚಿಗೆ NATO ತನ್ನ ಸದಸ್ಯ ರಾಷ್ಟ್ರವಾಗಿ 2020 ರ ಮಾರ್ಚ್. 27 ರಂದು ಉತ್ತರ ಮ್ಯಾಸಿಡೋನಿಯಾವನ್ನು ಸೇರಿಸಿಕೊಂಡಿದೆ. ಇದರಲ್ಲಿ ಸುಮಾರು 20 ದೇಶಗಳು NATO ನ ಶಾಂತಿಯ ಪಾಲುದಾರಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತವೆ, ಹಾಗೂ 15 ದೇಶಗಳು ಇನ್ನಿತರ ಸಾಂಸ್ಥಿಕ ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿವೆ. * ಈ ಹಿಂದೆ 2020 ರಲ್ಲಿ NATO ಸದಸ್ಯರ ಸಂಯೋಜಿತ ಮಿಲಿಟರಿ ವೆಚ್ಚವು ಒಟ್ಟು ಮೊತ್ತದ ಶೇ. 57 ರಷ್ಟು ಹೆಚ್ಚಾಗಿರುತ್ತದೆ. ಹಾಗೂ ಇದು 2024 ರ ವೇಳೆಗೆ ಅದರ GDP ಯ ಕನಿಷ್ಠ 2 ಪ್ರತಿಶತದಷ್ಟು ರಕ್ಷಣಾ ವೆಚ್ಚದ ಹಂತವನ್ನು ತಲುಪಲಿದೆ ಎಂದು ನ್ಯಾಟೋ ಸದಸ್ಯರು ಒಪ್ಪಿಕೊಂಡಿದ್ದಾರೆ.