Job Description: * ವಿಶ್ವ ವಿಖ್ಯಾತ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೊನಾಲ್ಡೋ ಅವರು ಹ್ಯಾಟ್ರಿಕ್‌ ಗೋಲ್‌ ಬಾರಿಸಿ ನೂತನ ದಾಖಲೆಯನ್ನು ನಿರ್ಮಿಸಿದ್ದಾರೆ. ರೊನಾಲ್ಡೋ ಅವರು ಟಾಟ್ಹಾನ್‌ಹ್ಯಾಮ್ ಹಾಟ್ಸ್ಫರ್ ತಂಡದ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ ಜಾಗತಿಕ ದಾಖಲೆಯನ್ನು ನಿರ್ಮಿಸಿದ್ದಾರೆ. * ಪ್ರಸ್ತುತ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಇದೀಗ ಫುಟ್ಬಾಲ್ ಇತಿಹಾಸದಲ್ಲೇ ಅತೀ ಹೆಚ್ಚು ಗೋಲು ಗಳಿಸಿರುವ ಆಟಗಾರರಾಗಿದ್ದಾರೆ. ಇತ್ತೀಚಿಗಿನ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನಲ್ಲಿ ನಡೆದಿರುವ ಪಂದ್ಯದಲ್ಲಿ ಮ್ಯಾಂಜೆಸ್ಟರ್ ಯುನೈಟೆಡ್ ತಂಡದ ಪರವಾಗಿ ರೊನಾಲ್ಡೋ ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿದ್ದಾರೆ. * ಇದೀಗ ರೊನಾಲ್ಡೋ ಅವರು ಈ ಪಂದ್ಯದ ಮೂಲಕ ಒಟ್ಟಾರೆಯಾಗಿ 807 ಗೋಲು ಗಳಿಸಿದ್ದಾರೆ ಅಗ್ರಸ್ಥಾನಕ್ಕೇರಿದ್ದಾರೆ. * ಕ್ರಿಸ್ಟಿಯಾನೊ ರೊನಾಲ್ಡೊ ಅವರು ಪೋರ್ಚುಗೀಸ್ ವೃತ್ತಿಪರ ಫುಟ್‌ಬಾಲ್ ಆಟಗಾರರಾಗಿದ್ದಾರೆ, ಇವರು ಪ್ರೀಮಿಯರ್ ಲೀಗ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಫಾರ್ವರ್ಡ್ ಆಗಿ ಪಂದ್ಯವನ್ನು ಆಡುತ್ತಾರೆ ಹಾಗೂ ಪೋರ್ಚುಗಲ್ ರಾಷ್ಟ್ರೀಯ ತಂಡದ ನಾಯಕರಾಗಿದ್ದಾರೆ. ರೊನಾಲ್ಡೊ '5' ಬ್ಯಾಲನ್ ಡಿ'ಓರ್ ಪ್ರಶಸ್ತಿಗಳು ಹಾಗೂ '4' ಯುರೋಪಿಯನ್ ಗೋಲ್ಡನ್ ಶೂಗಳನ್ನು ಜಯಿಸಿಕೊಂಡಿದ್ದಾರೆ. ಹಾಗೆಯೇ '7' ಲೀಗ್ ಪ್ರಶಸ್ತಿಗಳು, ಮತ್ತು '5' UEFA ಚಾಂಪಿಯನ್ಸ್ ಲೀಗ್‌ಗಳು, '1' UEFA ಯುರೋಪಿಯನ್ ಚಾಂಪಿಯನ್‌ಶಿಪ್ ಜೊತೆಗೆ '1' UEFA ನೇಷನ್ಸ್ ಲೀಗ್ ಸೇರಿ ಒಟ್ಟಾರೆಯಾಗಿ ತಮ್ಮ ವೃತ್ತಿಜೀವನದಲ್ಲಿ 32 ಟ್ರೋಫಿಗಳನ್ನು ಜಯಿಸಿಕೊಂಡಿದ್ದಾರೆ. ರೊನಾಲ್ಡೊ ಅವರು ಕ್ಲಬ್ ಹಾಗೂ ದೇಶಕ್ಕಾಗಿ 800 ಕ್ಕೂ ಅಧಿಕ ಅಧಿಕೃತ ಹಿರಿಯ ವೃತ್ತಿಜೀವನದ ಗೋಲುಗಳನ್ನು ಬಾರಿಸಿದ್ದಾರೆ. * ಇವರು ಈ ಹಿಂದೆ 2021 ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಮರಳುವಕ್ಕಿಂತ ಮೊದಲು ಎರಡು ಸೀರಿ ಎ ಪ್ರಶಸ್ತಿಗಳನ್ನು, ಎರಡು ಸೂಪರ್‌ಕಾಪ್ ಇಟಾಲಿಯಾನಾ ಹಾಗೂ ಕೊಪ್ಪಾ ಇಟಾಲಿಯಾವನ್ನು ಪ್ರಶಸ್ತಿಗಳನ್ನು ಜಯಿಸಿಕೊಂಡಿದ್ದರು.