Job Description: * ಇತ್ತೀಚಿಗೆ ಪಶ್ಚಿಮ ಬಂಗಾಳದ ಮೆಹುಲಿ ಘೋಷ್ ಅವರು ನ್ಯಾಶನಲ್ ಟಿ2 ಟ್ರಯಲ್ಸ್‌ನಲ್ಲಿ ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯ ವಿಭಾಗದಲ್ಲಿ ಕರ್ನಾಟಕ ರಾಜ್ಯದ ತಿಲೋತ್ತಮ ಸೇನ್‌ರನ್ನು 17-9 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. * ಈ ಹಿಂದೆ ಯೂತ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿರುವ ಮೆಹುಲಿ ಅವರು ಟಿ1 ಟ್ರಯಲ್ಸ್'ನಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿದ್ದರು. * ಕರ್ನಾಟಕ ರಾಜ್ಯದ ತಿಲೋತ್ತಮಾ ಅವರು ಜೂನಿಯರ್ ಮಹಿಳೆಯರ 10 ಮೀ. ಏರ್ ರೈಫಲ್ T2 ಟ್ರಯಲ್'ನ್ನು ಜಯಿಸಿಕೊಂಡಿದ್ದಾರೆ. ಇವರು T2 ಸ್ಪರ್ಧೆಯಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. * ಯೂತ್ ಒಲಿಂಪಿಕ್ ಗೇಮ್ಸ್ ಬೆಳ್ಳಿ ಪದಕವನ್ನು ಜಯಿಸಿರುವ ಮೆಹುಲಿ ಅವರು 630.1 ಅಂಕ ಗಳಿಸಿ 6ನೇ ಸ್ಥಾನಕ್ಕೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಹಾಗೆಯೇ 632.1 ಅಂಕಗಳನ್ನೂ ಪಡೆದಿರುವ ಗುಜರಾತ್‌ ರಾಜ್ಯದ ಎಲವೆನಿಲ್ ವಲರಿವನ್ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. * ಪುರುಷರ 50m ರೈಫಲ್ 3 ಸ್ಥಾನಗಳು T1 ಹಾಗೂ T2 ಪ್ರಯೋಗಗಳು ಸಹ ಅಂತ್ಯಗೊಂಡಿವೆ. ಭಾರತೀಯ ನೌಕಾಪಡೆಯ ನಿರಜ್ ಕುಮಾರ್ ಅವರು T1 ಚಿನ್ನದ ಪದಕದ ಪಂದ್ಯದಲ್ಲಿ ಮಧ್ಯಪ್ರದೇಶದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರನ್ನು 17-5 ಅಂತರದಿಂದ ಸೋಲಿಸಿದ್ದಾರೆ. T2 ನಲ್ಲಿ ಸೇನಾ ಗುರಿಕಾರ ಚೈನ್ ಸಿಂಗ್ ರೈಲ್ವೇಸ್‌ನ ಸ್ವಪ್ನಿಲ್ ಸುರೇಶ್ ಕುಸಾಲೆ ಅವರನ್ನು 17-9 ರಿಂದ ಸೋಲಿಸಿದ್ದಾರೆ. * ಪ್ರಸ್ತುತ ಸುಹ್ಲ್‌ನಲ್ಲಿರುವ ಭಾರತೀಯ ತಂಡಗಳಿಗೆ ಬಾಕು ಹಾಗೂ ಜೂನಿಯರ್ ವಿಶ್ವಕಪ್ ನ್ನು ಈ ಪ್ರಯೋಗಗಳಿಗೆ ಆಧಾರವಾಗಿ ಆಯ್ಕೆ ಮಾಡಲಾಗುತ್ತದೆ.