Job Description: * ಭಾರತ ದೇಶವು ಜಾಗತಿಕ ಆಮದಿನಲ್ಲಿ ಶೇ. 11 ಪ್ರತಿಶತ ಹೊಂದಿರುವ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರರಲ್ಲಿ ಒಂದಾಗಿದೆ ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ವರದಿ ಮಾಡಿದೆ. * ಚೀನಾ ಹಾಗೂ ಏಷ್ಯಾ ಹಾಗೂ ಓಸೀನಿಯಾದ ಅನೇಕ ದೇಶಗಳ ನಡುವೆ ಇರುವ ಗಡಿ ಸಮಸ್ಯೆಗಳೇ ಈ ಆಮದುಗಳಿಗೆ ಬಹಳ ಮುಖ್ಯ ಕಾರಣಗಳಾಗಿವೆ. 2012-16 ಹಾಗೂ 2017-21 ರ ನಡುವೆ ಭಾರತದ ಶಸ್ತ್ರಾಸ್ತ್ರ ಆಮದು ಶೇ. 21 ರಷ್ಟು ಕಡಿಮೆಯಾಗಿದೆ ಆದರೂ ಜಾಗತಿಕವಾಗಿ ಅತಿದೊಡ್ಡ ಆಮದುದಾರರಲ್ಲಿ ಭಾರತವು ಕೂಡ ಒಂದಾಗಿದೆ. * ಪ್ರಸ್ತುತ ಅಮೇರಿಕ ಏಷ್ಯಾ ಹಾಗೂ ಓಸಿನಿಯಲ್‌ಗೆ ಅತಿದೊಡ್ಡ ಪೂರೈಕೆದಾರನಾಗಿ ಉಳಿದುಕೊಂಡಿರುವ ದೇಶಗಳಾಗಿವೆ. ಏಷ್ಯಾ ಹಾಗೂ ಓಷಿಯಾನಿಯಾ ಸದ್ಯ ಪ್ರಮುಖ ಶಸ್ತ್ರಾಸ್ತ್ರಗಳಿಗೆ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ಪ್ರದೇಶವಾಗಿದೆ. * ಪ್ರಸ್ತುತ ಭಾರತ, ಆಸ್ಟ್ರೇಲಿಯಾ, ಚೀನಾ, ದಕ್ಷಿಣ ಕೊರಿಯಾ, ಪಾಕಿಸ್ತಾನ ಹಾಗೂ ಜಪಾನ್ ಈ '6' ದೇಶಗಳು ಜಾಗತಿಕವಾಗಿ ಅತಿದೊಡ್ಡ ಆಮದುದಾರ ದೇಶಗಳಾಗಿವೆ. * 2016–20 ರಲ್ಲಿ '5' ದೊಡ್ಡ ಶಸ್ತ್ರಾಸ್ತ್ರ ರಫ್ತುದಾರ ರಾಷ್ಟ್ರಗಳು ಯುನೈಟೆಡ್, ರಷ್ಯಾ, ಫ್ರಾನ್ಸ್, ಜರ್ಮನಿ ಹಾಗೂ ಚೀನಾ ದೇಶಗಳು. ಹಾಗೆಯೇ ಶಸ್ತ್ರಾಸ್ತ್ರ ಆಮದುದಾರ ದೇಶಗಳು ಸೌದಿ ಅರೇಬಿಯಾ, ಭಾರತ, ಈಜಿಪ್ಟ್, ಆಸ್ಟ್ರೇಲಿಯಾ ಮತ್ತು ಚೀನಾ ಹಾಗೂ ಏಷ್ಯಾ ಮತ್ತು ಓಷಿಯಾನಿಯಾ 2021 ರ ಮಾರ್ಚ್.15 ರಿಂದ SIPRI ಯ ಮುಕ್ತ-ಪ್ರವೇಶ ಶಸ್ತ್ರಾಸ್ತ್ರ ವರ್ಗಾವಣೆ ಡೇಟಾಬೇಸ್ 1950-2020 ರ ಪ್ರಮುಖ ಶಸ್ತ್ರಾಸ್ತ್ರಗಳ ವರ್ಗಾವಣೆಯ ಕುರಿತು ನವೀಕರಿಸಿದ ಡೇಟಾವನ್ನು ಹೊಂದಿದೆ.