Job Description: * ಏರ್ ಇಂಡಿಯಾದ ಅಧ್ಯಕ್ಷರಾಗಿ ಟಾಟಾ ಸನ್ಸ್ ಮುಖ್ಯಸ್ಥ ನಟರಾಜನ್ ಚಂದ್ರಶೇಖರನ ಅವರನ್ನು ಟಾಟಾ ಗ್ರೂಪ್ ಇತ್ತೀಚಿಗೆ ಘೋಷಣೆ ಮಾಡಿದೆ. * ಈ ಹಿಂದೆ ಟಾಟಾ ಗ್ರೂಪ್ ಟರ್ಕಿಯ ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಎಂದು ಘೋಷಣೆ ಮಾಡಿತ್ತು, ಇವರ ನೇಮಕಾತಿಯು ಇತ್ತೀಚಿಗೆ ಭಾರತದಲ್ಲಿ ವಿವಾದವನ್ನು ಸೃಷ್ಟಿಸಿತ್ತು. ಈ ಹಿನ್ನಲೆಯಿಂದಾಗಿ ಟಾಟಾ ಗ್ರೂಪ್ ನ ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಲು "ಇಲ್ಕರ್ ಐಸಿ" ನಿರಾಕರಿಸಿದ್ದರು. * ಚಂದ್ರಶೇಖರನ್ ಟಾಟಾ ಸನ್ಸ್‌ನ ಅಧ್ಯಕ್ಷರಾಗಿದ್ದಾರೆ, ಇವರು ಈ ಹಿಂದೆ 2016 ರ ಅಕ್ಟೋಬರ್'ನಲ್ಲಿ ಟಾಟಾ ಸನ್ಸ್ ಮಂಡಳಿಗೆ ಸೇರಿಕೊಂಡಿದ್ದಾರೆ, ನಂತರ 2017 ರ ಜನವರಿಯಲ್ಲಿ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. * ಪ್ರಸ್ತುತ ಚಂದ್ರಶೇಖರನ್ ಅವರು ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟಾಟಾ ಪವರ್, ಹಾಗೂ TCS ಇನ್ನು ಹೀಗೆ ಹಲವಾರು ಟಾಟಾ ಗ್ರೂಪ್ ಆಪರೇಟಿಂಗ್ ಕಂಪನಿಗಳ ಮಂಡಳಿಗಳಿಗೆ ಅಧ್ಯಕ್ಷರಾಗಿದ್ದಾರೆ. ಇವರು ಈ ಹಿಂದೆ 2009 ರಿಂದ 2017ರವರೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಚಂದ್ರಶೇಖರನ್ ಟಾಟಾ ಗ್ರೂಪ್‌ನ ಮುಖ್ಯಸ್ಥರಾದ ಮೊದಲ ಪಾರ್ಸಿಯೇತರ ಹಾಗೂ ವೃತ್ತಿಪರ ಕಾರ್ಯನಿರ್ವಾಹಕರಾಗಿದ್ದಾರೆ. * ಚಂದ್ರಶೇಖರನ್ ಅವರು ಟಾಟಾ ಮೋಟಾರ್ಸ್ ಹಾಗೂ ಟಾಟಾ ಗ್ಲೋಬಲ್ ಬೆವರೇಜಸ್ ಅಧ್ಯಕ್ಷರಾಗಿದ್ದರ. 2019 ರ ಡಿಸೆಂಬರ್. 18 ರಂದು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ಚಂದ್ರಶೇಖರನ್ ಅವರನ್ನು ಅಕ್ರಮವಾಗಿ ನೇಮಕ ಮಾಡಿತು ಹಾಗೂ ಸೈರಸ್ ಮಿಸ್ತ್ರಿ ಅವರನ್ನು ಕಾರ್ಯಕಾರಿ ಅಧ್ಯಕ್ಷರನ್ನಾಗಿ ಮರುಸ್ಥಾಪಿಸಿತು. ನಂತರ 2020 ರ ಜನವರಿಯಲ್ಲಿ ಭಾರತದ ಸುಪ್ರೀಂ ಕೋರ್ಟ್ NCLAT ನ್ನು ರದ್ದುಗೊಳಿಸಿದೆ.